ಜಿಲ್ಲೆ

ಹಿಮಾಲಯ ಪರ್ವತವನ್ನೇರಿದ ವೈದ್ಯ

ಚಿತ್ರದುರ್ಗ:ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಕಿವಿ,ಮೂಗು, ಗಂಟಲು ವಿಭಾಗದ ಹಿರಿಯ ಅಧ್ಯಾಪಕ ಡಾ.ಎನ್.ಬಿ. ಪ್ರಹ್ಲಾದ್ ಅವರು ಈಚೆಗೆ ಹಿಮಾಚಲ ಪ್ರದೇಶದ ಹಮಟಾಪಾಸ್ ಬಳಿಯ 14100 ಅಡಿ ಎತ್ತರದ ಹಿಮಾಲಯದ ಪರ್ವತವನ್ನು ಏರಿದ್ದಾರೆ.
ಸ್ಟಂಟ್ ಅಳವಡಿಸಿರುವ ವಯಸ್ಸಾದ ಹೃದ್ರೋಗಿಗಳಿಗೆ ಹೆಚ್ಚಿನ ಎತ್ತರ,ಹವಾಮಾನ ವೈಪರೀತ್ಯ ಮತ್ತು ಕಷ್ಟಕರ ವಿಭಿನ್ನ ಭೂಪ್ರದೇಶಗಳಿಂದ ಕೂಡಿದ ಪರ್ವತ ಶ್ರೇಣಿಗಳಲ್ಲಿ ಆಗಬಹುದಾದ ಪರಿಣಾಮಗಳೆಡೆ ನಡೆಸಿದ್ದ ವೈದ್ಯಕೀಯ ಸಂಶೋಧನಾ ಶೃಂಗಸಭೆಯಲ್ಲಿ ಪ್ರಹ್ಲಾದ್ ಮತ್ತಿತರ ಐವರು ವೈದ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಡೆದಿದ್ದ ಚಾರಣದ ವೇಳೆ ಪ್ರಹ್ಲಾದ್ ಯಶಸ್ವಿಯಾಗಿ ಪರ್ವತವನ್ನು ಏರಿದ್ದಾರೆ ಎಂದು ಬಸವೇ ಶ್ವರ ಅಸ್ಪತ್ರೆ ವ್ಯವಸ್ಥಾಪಕ ಸತ್ಯನಾರಾಯಣ್ ತಿಳಿಸಿದ್ದಾರೆ.