ಚಾಮರಾಜನಗರ: ತಾಲೂಕಿನ ಮುಕ್ಕಡಹಳ್ಳಿ ಗ್ರಾಮದಲ್ಲಿ 2025-26 ನೇ ಸಾಲಿನ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಇತ್ತೀಚೆಗೆ ಹಿಪ್ಪುನೇರಳೆ ಸುಕೃಷಿ ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಕ್ಕಡಹಳ್ಳಿ ಗ್ರಾಮದ ಪ್ರಸಾದ್ ಎಂಬುವವರ ಜಮೀನಿನಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಚಾಮರಾಜನಗರ ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಈ ವೇಳೆ ಜಮೀನಿನಲ್ಲಿ ಪೋಷಕಾಂಶ ಹಾಗೂ ಸಸ್ಯ ಸಂರಕ್ಷಣೆಯ ಕಿಟ್ ಅನ್ನು ಕ್ಷೇತ್ರ ಪಾತ್ಯಕ್ಷಿತೆಯ ಮೂಲಕ ಅದರ ಉಪಯೋಗ ಹಾಗೂ ಹಿಪ್ಪುನೇರಳೆಯ ಸಮಗ್ರ ಬೆಳೆ ನಿರ್ವಹಣೆಯ ಮಾಹಿತಿಯನ್ನು ನೀಡಲಾಯಿತು. ಈ ಸುಕೃಷಿ ಉತ್ಪನ್ನವು ಹಿಪ್ಪುನೇರಳೆ ಗಿಡವು ಆರೋಗ್ಯಕರವಾಗಿ ಬೆಳೆಯುವುದಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಲಾಯಿತು.
ಕಾರ್ಯಕ್ರಮಕ್ಕೆ ಬೇಸಾಯ ಶಾಸ ಪ್ರಾಧ್ಯಾಪಕ ಡಾ.ಪಿ.ಪ್ರಕಾಶ್, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಸಂಯೋಜಕ ಡಾ.ಜಿ.ನಾಗೇಶ್, ರೇಷ್ಮೆಕೃಷಿ ವಿಜ್ಞಾನಿ ಡಾ. ಚಂದ್ರಶೇಖರ್, ಎಸ್. ಕಳ್ಳಿಮನಿ, ಸಂಪನ್ಮೂಲ ವ್ಯಕ್ತಿ ಗಣಪತಿ ಭಟ್, ಮುಕ್ಕಡಹಳ್ಳಿ , ಕೇತಳ್ಳಿ , ಗಟ್ಟವಾಡಿಪುರ ಗ್ರಾಮಗಳ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.