ಜಿಲ್ಲೆ

ಹಿಂಸೆಯಿಂದ ಆವರಿಸಲಿದೆ ಕ್ರೂರ ಶಕ್ತಿ

ಅಶೋಕ್ ಕುಮಾರ್ ಎನ್

ಹಗರಿಬೊಮ್ಮನಹಳ್ಳಿ: ಭಗವಾನ್ ಶ್ರೀ ಮಹಾವೀರ ಶಾಂತಿ-ಅಹಿಂಸೆಗಳ ಅವದೂತರಾಗಿದ್ದಾರೆ ಎಂದು ಜೈನ ಶ್ವೇತಾಂಬರ ಕಾರ್ಯಕಾರಿ ಸಮಿತಿ ಸದಸ್ಯ ವಿಕಾಸ್ ಬಾಫ್ನಾ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಹಿಂಸೆಯಿಂದ ಮನುಷ್ಯನಲ್ಲಿ ಕ್ರೂರಶಕ್ತಿ ಆವರಿಸಲು ಆರಂಭವಾಗುತ್ತದೆ. ಭೂಮಿ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಮನುಷ್ಯನಿಗೆ ಅತಿಬುದ್ಧಿವಂತ ಜೀವಿ ಎಂದು ಕರೆಯಲಾಗುತ್ತೆ. ಆದ್ದರಿಂದ ಯಾರಿಗೂ ಹಿಂಸೆ ಮಾಡದೆ ಜೀವನ ಸಾಗಿಸುವುದು ಮನುಷ್ಯನ ಕರ್ತವ್ಯವಾಗಿದೆ. ಶಾಂತಿ ಮಂತ್ರದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಉಪತಹಸೀಲ್ದಾರ್ ಶಿವಕುಮಾರ್‌ಗೌಡ ಮಾತನಾಡಿ, ಮಹಾವೀರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಈ ಮೂಲಕ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೈನ ಶ್ವೇತಾಂಬರ ಸಮಿತಿ ಪದಾಧಿಕಾರಿಗಳಾದ ದಿನೇಶ ಧಾರಿವಾಲ್, ಮಹಾವೀರ ಸಾಲೇಜ, ರಾಜೇಂದ್ರ ಕುಮಾರ್, ಪ್ರವೀಣ, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.