ಬಾಗಲಕೋಟೆ: ಕಾಶ್ಮೀರದ ಪಹಲ್ಗಾಮ್‌ದಲ್ಲಿ ಹಿಂದೂಗಳ ನರಮೇಧ ಮಾಡಿದ ಉಗ್ರರ ದಾಳಿ ಖಂಡಿಸಿ ನಗರದಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಜನ ಸಂಪರ್ಕ ಕಾರ್ಯಾಲಯದಿಂದ ಆರಂಭವಾದ ಪ್ರತಿಭಟನೆಯು ನಗರದ ಬಸವೇಶ್ವರ ವೃತ್ತದವರೆಗೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು. ನಂತರ ಉಗ್ರರ ವಿರುದ್ಧ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ದೇಶದಮೇಲೆ ನಡೆದ ಗದಾಪ್ರಹಾರ ಹೇಡಿತನದ ಕೃತ್ಯ. ಧೈರ್ಯವಿದ್ದರೆ ಎದುರುಗಡೆ ನಿಂತು ಎದುರಿಸುವ ಶಕ್ತಿ ಇಲ್ಲ. ಹೀಗಾಗಿ ಹಿಂದಿನಿAದ ದಾಳಿ ಮಾಡುತ್ತಿದ್ದಾರೆ. ಹಿಂದೂಗಳ ಮೇಲೆ ದಾಳಿ ಮಾಡುವವರ ವಿರುದ್ದ ತಕ್ಕ ಪಾಠ ಕಲಿಸ ಬೇಕಾಗುತ್ತದೆ. ಧರ್ಮ ಆಧಾರಿತ ಭಯೋತ್ಪಾದನೆ ನಾಚಿಕೆಗೇಡಿನ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ. ಪ್ರತಿಕಾರ ನೀಡುವುದು ನಿಶ್ಚಿತ ಎಂದು ಹೇಳಿದರು.
ಮುಖಂಡರಾದ ಸಂಗನಗೌಡ ಗೌಡರ, ಡಾ. ಶೇಖರ ಮಾನೆ, ವಿರುಪಾಕ್ಷ ಅಮೃತಕರ್, ಯಲ್ಲಪ್ಪ ಅಂಬಿಗೇರ್, ಸಂಜು ಡಿಗ್ಗಿ, ಮಲ್ಲಿಕಾರ್ಜುನ ಸುರಪುರ, ಅಪ್ಪಣ ಪೂಜಾರ, ಶೈಲು ಅಂಗಡಿ, ರಾಜು ಗೌಳಿ, ರಾಘವೇಂದ್ರ ನಾಗೂರ, ಕಳಕಪ್ಪ ಬಾದವಾಡಗಿ, ಗೋಪಾಲ್ ಕಟ್ಟಿಮನಿ, ಮುತ್ತುರಾಜ ಅರಗಿನಶೆಟ್ಟಿ, ಗುರಲಿಂಗಪ್ಪ ಅಂಬಿಗೇರ, ಹಣಮಂತ ಅಂಬಿಗೇರ, ಈರಪ್ಪ ತಂಬಾಕದ , ಗಂಗೂಬಾಯಿ ರಜಪೂತ, ಶಾಂತಾಬಾಯಿ ಗೋಣಿ, ವಿಜಯಲಕ್ಷಿ÷್ಮÃ ಅಂಗಡಿ, ಈರಣ್ಣ ಗವಿಮಠ, ಗಣೇಶ ದುಧಾನಿ, ಡಾ.ಸುಽÃರ್ ಜಾಧವ್, ಸಿಂಧೂರ್ ಕಟ್ಟಿಮನಿ, ಬಸವರಾಜ್ ದಾಳಿ, ಸುರೇಶ ದಾಳಿ ಇತರರು ಇದ್ದರು.