ಗಣೇಶ ವಿಸರ್ಜನೆ ಕೆರೂರಿನ ಅಮಾಯಕ ಯುವಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಆರೋಪಿಸಿ ಈಚೆಗೆ ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಮಹಿಳೆಯರು ಕಣ್ಣೀರು ಹಾಕಿ ಪ್ರತಿಭಟನೆ ನಡೆಸಿದರು ( ಸಂಗ್ರಹ ಚಿತ್ರ)  
ಜಿಲ್ಲೆ

ಹಿಂದೂ ಜಾಗರಣ ವೇದಿಕೆಯಿಂದ ಕೆರೂರ ಚಲೋ

ಬಾಗಲಕೋಟೆ: ಜಿಲ್ಲೆಯ ಮತೀಯ ಸೂಕ್ಷ್ಯ ಪ್ರದೇಶವಾಗಿರುವ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಈಚೆಗೆ ನಡೆದ ಕೆಲ ಅಹಿತಕರ ಘಟನೆಗಳಿಂದ ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತವಾದಂತೆ ಗೋಚರಿಸಿದರೂ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಕಾಣಿಸುತ್ತಿದೆ.
ಕೆಲ ತಿಂಗಳ ಹಿಂದೆ ನಡೆದಿದ್ದ ಕೆರೂರ ಕೋಮು ಗಲಿಭೆ ಬಳಿಕ ಶಾಂತವಾಗಿದ್ದ ಕೆರೂರ ಕಟ್ಟಣ ಇತ್ತೀಚಿಗೆ ಗಣೇಶ ವಿಸರ್ಜನೆ ವೇಳೆ ನಡೆದ ಪೊಲೀಸರ ಮೇಲೆ ಹಲ್ಲೆ ಹಾಗೂ ಆ ನಂತರದಲ್ಲಿ ಆರೋಪಿಗಳ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಬಗ್ಗೆ ಆರೋಪ, ಪ್ರತ್ಯಾರೋಪಗಳು ಹೆಚ್ಚಿದ್ದು, ದಿನೇ ದಿನೇ ಬೇರೆ ಸ್ವರೂಪಕ್ಕೆ ತಿರುಗುವ ಸಾಧ್ಯತೆಗಳು ಕಂಡು ಬರುತ್ತಿವೆ.
ಇದೀಗ ಗಣೇಶ ಭಕ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳು ಮೊಕದಮೆ ದಾಖಲಿಸಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಸೋಮವಾರ ಕೆರೂರು ಚಲೋ ಕರೆ ನೀಡಿದೆ. ಹಿಂಜಾವೇ ವರಿಷ್ಠ ಜಗದೀಶ ಕಾರಂತ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಂಘಟನೆ ವೇದಿಕೆ ಸಜ್ಜುಗೊಳಿಸಿದೆ.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕೆಲವರು ಸಿಪಿಐ ಕರೆಪ್ಪ ಬನ್ನೆ ಹಾಗೂ ಇಬ್ಬರು ಪೊಲೀಸ್ ಕಾನ್ಸಟೇಬಲ್ ಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಆ ಬಳಿಕ ಘಟನೆಗೆ ಸಂಬಂಸಿದಂತೆ ಪೊಲೀಸರ ಮೇಳೆ ಹಲ್ಲೆ ನಡೆಸಿರುವ ಆರೋಪದ ಮೇಲೆ 7 ಜನರನ್ನು ಬಂಸಲಾಗಿತ್ತು.
ಆದರೆ, ಆ ಗಲಾಟೆಯಲ್ಲಿ ಶರಣಬಸು ಸಜ್ಜನ ಅವರನ್ನು ಬಂಧಿಸಿ ಆತನಿಗೆ ಚಿತ್ರಹಿಂಸೆ ನೀಡಿದ್ದಾರೆ. ಗಲಾಟೆಯಲ್ಲಿ ಶರಣಬಸು ವಿರುದ್ದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಇಡೀ ರಾತ್ರಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಹಿಂದೂ ಸಂಘಟನೆಗಳ ಆರೋಪವಾಗಿದೆ. ಆತನ ಮೇಲೆ ಭಾರಿ ಹಲ್ಲೆ ನಡೆಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಹಿಂಜಾವೇ ಪಟ್ಟು ಹಿಡಿದಿತ್ತು. ಈ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳ ಕಚೇರಿ ಎದುರು ಧರಣಿ ನಡೆಸಿದ್ದ ಕಾರ್ಯಕರ್ತರು ಎರಡು ದಿನಗಳ ಗಡುವು ನೀಡಿದ್ದರು. ಇದೀಗ ಮುಂದುವರೆದು ಕೆರೂರು ಚಲೋಗೆ ಕರೆ ನೀಡಿದ್ದಾರೆ.

ಕೆರೂರ ಪಟ್ಟಣಕ್ಕೆ ಸಚಿವರ ಭೇಟಿ :
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಕೆರೂರ ಪಟ್ಟಣಕ್ಕೆ ಭೇಟಿ ನೀಡಿ ಇದೇ ವಿಚಾರವಾಗಿ ಹಿಂಜಾವೇ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ಇದು ಸೂಕ್ಷ್ಮ ವಿಚಾರವಾಗಿದೆ. ಇದು ಮತ್ತೆ ಮರುಕಳಿಸಬಾರದು. ಯಾರೂ ಸಹ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಸಮಸ್ಯೆ ಇದ್ದರೆ ಜಿಲ್ಲಾಡಳಿತದ ಜೊತೆ ಚರ್ಚಿಸಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಲು ಕಾನೂನು ಇದೆ. ಸಂಘಟನೆಗಳ ಅಹವಾಲು ಸ್ವೀಕರಿಸಲು ಸಿದ್ದನಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೂ ನೈತಿಕ ಸ್ಥೈರ್ಯ ಬೇಕು ಅದನ್ನು ಕೊಡಲು ಸಿದ್ದನಿದ್ದೇನೆ. ಶಾಂತತೆಯಿಂದ ಜೀವನ ನಡೆಸುವ ವಾತಾವರಣಕ್ಕೆ ಮುನ್ನುಡಿ ಬರೆಯಬೇಕು. ಮೊದಲೇ ಅಕ ಮಳೆಯಿಂದ ಜನರು ಸಂಕಷ್ಟದಲ್ಲಿ ಇದ್ದಾರೆ. ಇಂತದ್ದರಲ್ಲಿ ಕೋಮು ದಳ್ಳುರಿಗೆ ಅವಕಾಶ ಆಗಬಾರದು ಎಂದು ಹೇಳಿದರು.