oppo_2 
ಜಿಲ್ಲೆ

ಹಿಂದುಳಿದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಕಲಬುರಗಿ: ರಾಜ್ಯ  ಸರ್ಕಾರ ಸೆ.೨೨ರಿಂದ ನಡೆಸುತ್ತಿರುವ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಜನಗಣತಿಯಲ್ಲಿ ರಾಜ್ಯದ ಎಲ್ಲ ಹಿಂದುಳಿದ ರ‍್ಗಗಳ ಸಮುದಾಯದವರು ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಸ್ಥಿತಿಗತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಹಿಂದುಳಿದ ರ‍್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ತಿಳಿಸಿದರು.

ಹಿಂದೆ ಕಾಂತರಾಜು ಆಯೋಗದ ವರದಿಯೂ ವೈಜ್ಞಾನಿಕವಾಗಿಯೇ ನಡೆದಿತ್ತು. ಆದರೆ ೧೦ ರ‍್ಷವಾದ ಹಿನ್ನೆಲೆಯಲ್ಲಿ ನಿಯಮದ ಪ್ರಕಾರ ಜಾರಿ ಮಾಡಲು ಅವಕಾಶವಿರಲಿಲ್ಲ. ಆದ್ದರಿಂದ ಪ್ರಸ್ತುತ ರಾಜ್ಯ ರ‍್ಕಾರವೂ ಪ್ರತಿ ಮನೆ ಮನೆಗೆ ಭೇಟಿ ನೀಡುವ ನಿಟ್ಟಿನಲ್ಲಿ ಹೊಸ ಗಣತಿ ನಡೆಸುತ್ತಿದ್ದು, ಹಿಂದುಳಿದ ರ‍್ಗಗಳ ಎಲ್ಲ ಸಮುದಾಯದವರು ತಮ್ಮ ತಮ್ಮ ಜಾತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಸಾಮಾಜಿಕ ಶೈಕ್ಷಣಿಕ ಜಾತಿ ಸಮೀೆ ಇದಾಗಿದ್ದು, ಕುಟುಂಬದ ಉದ್ಯೋಗ, ಸ್ಥಿತಿಗತಿ ಸ್ಪಷ್ಟವಾಗಿ ಉಲ್ಲೇಖ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ಸಮಾಜಗಳಿಗೆ ದೊರೆಯುವ ಸೌಲಭ್ಯಗಳು ನರ‍್ಧಾರವಾಗಲಿವೆ. ಹಿಂದುಳಿದ ರ‍್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್​ ನಾಯಕ ಅವರ ನೇತೃತ್ವದಲ್ಲಿ ೧.೭೫ ಲಕ್ಷ ಶಿಕ್ಷಕರು ಹಾಗೂ ಆಶಾ ಕರ‍್ಯರ‍್ತೆಯರು, ಎನ್​ಎಸ್​ಎಸ್​, ಎನ್​ಸಿಸಿ ಯುವಕರು ಸಮೀೆಯಲ್ಲಿ ಕರ‍್ಯನರ‍್ವಹಿಸಲಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಆಧಾರ್​ ಕರ‍್ಡ್​, ಪಡಿತರ ಚೀಟಿ, ಮೊಬೈಲ್​ ಸಂಖ್ಯೆಗೆ ಜಿಯೋ ಟ್ಯಾಗ್​ ಮಾಡುತ್ತಿದ್ದು, ಯಾರೊಬ್ಬರೂ ಕೈತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋರಿದರು.

ಪ್ರಮುಖರಾದ ಪಿಡ್ಡಪ್ಪ ಜಾಲಗಾರ, ಸುಭಾಷ ಪಂಚಾಳ, ಕುಮಾರ ಯಾದವ, ವೆಂಕಟೇಶ ನೇದಲಗಿ, ಮಲ್ಲೇಶ, ಶರಣಪ್ಪ ಭಂಕೂರ ಇತರರಿದ್ದರು.