ಜಿಲ್ಲೆ

ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ಸಭೆ!.

ಅರಸೀಕೆರೆ: ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಜ.24ರಂದು ಹಾಸನದ ಎಚ್‌ಎಂಟಿ ಕಲ್ಯಾಣ ಮಂಟಪದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ಸಭೆ ಕರೆಯಲಾಗಿದೆ ಎಂದು ಒಬಿಸಿ ರಾಜ್ಯ ಕಾರ್ಯದರ್ಶಿ ಮಾಡಾಳು ಕೊಟ್ರೇಶ್ ಹೇಳಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿ ಹೆಚ್ಚಳ ಸೇರಿ ಹತ್ತು ಹಲವು ಕಾರ್ಯಕ್ರಮಗಳು ಹಿಂದುಳಿದ ವರ್ಗಗಳಿಗೆ ತಲುಪಿವೆ.ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ.ಪ್ರಚಾರದ ಗೀಳಿಗೆ ಬಿದ್ದಿರುವ ವಿಪಕ್ಷಗಳು ಇಲ್ಲ ಸಲ್ಲದ ಆರೋಪ ಮಡುವ ಮೂಲಕ ಉಭಯ ಸರ್ಕಾರಗಳಿಗೆ ಕೆಟ್ಟ ಹೆಸರು ತರಲು ಸಂಚು ರೂಪಿಸಿರುವುದು ಜಗಜ್ಜಾಹಿರಾಗಿದೆ. ಕಳೆದ ಮೂರ ವರ್ಷದಲ್ಲಿ ಒಬಿಸಿ ವತಿಯಿಂದ ನಡೆದಿರುವ ಚಟುವಟಿಕೆಗಳ ಪರಾಮರ್ಶೆ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದರು.


ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಶೋಕ್ ಮೂರ್ತಿ ಮಾತನಾಡಿ,ಕಳೆದ 60 ವರ್ಷದಿಂದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮತದಾರರನ್ನು ಓಟ್‌ಬ್ಯಾಂಕ್‌ಗೆ ಸೀಮಿತ ಮಾಡಿಕೊಂಡಿತ್ತು. ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು ಬಿಜೆಪಿ ಸರ್ಕಾರ ದನಿಯಿಲ್ಲದವರ ನೆರವಿಗೆ ಧಾವಿಸಿದೆ ಎಂದು ಸಮರ್ಥಿಸಿಕೊಂಡರು.

ಓಬಿಸಿ ನಗರ ಘಟಕದ ಅಧ್ಯಕ್ಷ ದಿನೇಶ್, ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಅಶೋಕ್, ಮುಖಂಡರಾದ ದಾಸೇನಹಳ್ಳಿ ಮಹಾಲಿಂಗಪ್ಪ, ಮಣಿಕಂಠ, ಬಿಳಿಕಲ್ ನಟರಾಜ್ ಇತರರಿದ್ದರು.

21ಎಆರ್‌ಎಸ್2-ಹಿಂದುಳಿದ ವರ್ಗಗಳ ಕಾರ್ಯಕಾರಣಿ- ಮಾಡಾಳು ಕೊಟ್ರೇಶ್.