ಬೇಲೂರು: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಒಟ್ಟು 210 ಕೋಟಿ ರೂ, ಗಳಲ್ಲಿ ವಸತಿ ನಿಲಯ ಕಟ್ಟಡ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪಟ್ಟಣ ಸಮೀಪದ ಹೇಮಾವತಿ ಮಂಜುನಾಥ್ ಬಡವಾಣಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಭಾಲಕೀಯರ ವಸತಿ ನಿಲಯಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದುಳಿದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2 ಕೋಟಿ ರೂ, ಅನುದಾನದಲ್ಲಿ ವಸತಿ ನಿಲಯ ಕಟ್ಟಡ ಕಾಮಗಾರಿ ಮಡಿಸಲಾಗುತ್ತಿದೆ. ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಉತ್ತಮ ವಿದ್ಯಾಭ್ಯಾಸ ಮಡುವ ಮೂಲಕ ಉತ್ತಮ ಪ್ರಜೆಯಾಗಬೇಕು. ಮತ್ತು ಬೇಲೂರು ಕ್ಷೇತ್ರದಲ್ಲಿ ಹೆಚ್ಚು ವಸತಿ ನಿಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕೆಲಸದೊಂದಿಗೆ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು. ಇದಾದ ನಂತರ ಮೆಟ್ರಿಕ್ ನಂತರದ ಭಾಲಕೀಯರ ವಸತಿ ನಿಲಯಕ್ಕೂ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ತಾಲೂಕಿನ ಬಿಕ್ಕೋಡಿನಲ್ಲಿ ಅಂಬೇಡ್ಕರ್ ವಸತಿ ಶಾಲೆ, ಬಾಲಕರ ವಸತಿ ನಿಲಯ, ಬೆಟ್ಟದಾಲೂರಿನಲ್ಲಿ ವಸತಿ ಶಾಲೆ, ಹಳೇಬೀಡಿನಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಸೇರಿದಂತೆ ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 40 ಕಟ್ಟಡ ನಿರ್ಮಿಸಲಾಗಹಿದೆ. ಇದರ ಸದೂಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ಸಂತೋಷ್, ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಹೆಚ್.ಮಹೇಶ್, ಬಿಸಿಎಂ ಇಲಾಖೆ ಅಧಿಕಾರಿ ನಾರಾಯಣಪ್ಪ, ಜೆಡಿಎಸ್ ಮುಖಂಡರಾದ ಸೌಮ್ಯ, ಮಹೇಶ್, ಗುತ್ತಿಗೆದಾರ ದೀಪು ಸೇರಿದಂತೆ ಇತರರಿದ್ದರು.