ಜಿಲ್ಲೆ

ಹಿಂದು ಸಮಾಜ ಕೆಟ್ಟದ್ದು ಸ್ವೀಕರಿಸಲ್ಲ

ಬೀದರ್: ಕೆಟ್ಟದ್ದು ಮಾಡಿದವರನ್ನು ಹಿಂದು ಸಮಾಜ ಸ್ವೀಕರಿಸಲ್ಲ. ಇದು ಈ ಸಮಾಜದ ವಿಶಿಷ್ಟ ಎಂದು ವಿಶ್ವ ಹಿಂದು ಪರಿಷತ್ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದಶರ್ಿ ಗೋಪಾಲಜಿ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಮಾತನಾಡಿ, ನಮ್ಮಲ್ಲಿ ರಾವಣ, ಕಂಸ ಎಂದು ಯಾರೂ ಹೆಸರಿಟ್ಟಿಲ್ಲ. ಆದರೆ ಸದ್ದಾಂ ಎಂಬ ಹೆಸರಿಡುವ ಜನರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘ ಬೆಳೆಸುತ್ತಿರುವ ರಾಷ್ಟ್ರೀಯತೆ ನಮ್ಮ ಮೊದಲ ಆದ್ಯತೆ ಆಗಬೇಕು. ನಾವೆಲ್ಲ ಒಂದೇ ಮೂಲಕ್ಕೆ ಸೇರಿದವರು. ಹೀಗಾಗಿ ನಾವೆಲ್ಲ ಒಂದು, ಬಂಧು ತತ್ವದಡಿ ನಡೆಯಬೇಕು. ಸಂಘದ ಕಾರ್ಯ ದೇಶಾದ್ಯಂತ ವ್ಯಾಪಕವಾಗಿ ಹರಡಿದೆ. ಜಾತಿಗೆ ಮಹತ್ವ ಇಲ್ಲ. ಗುಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಸೋದರ ಸಂಬಂಧ ಗಟ್ಟಿಗೊಳಿಸುವ ಉದ್ದೇಶದಿಂದ ಹಲವು ವರ್ಷಗಳಿಂದ ನಡೆದುಕೊಂಡು ಬಂದ ಭಾರತೀಯ ಸಂಸ್ಕೃತಿಯನ್ನು ಸಂಪೂರ್ಣ ರಾಷ್ಟ್ರಮಯಗೊಳಿಸುವುದು ಸಂಘದ ಉದ್ದೇಶ. ಸಮಯ ನಿಗದಿಯಂತೆ ಚಂದ್ರನಲ್ಲಿ ಚಂದ್ರಯಾನ ಯಶಸ್ವಿಯಾಗಿ ಇಳಿಸಲಾಗಿದೆ. ನಾವು ಯಾರಿಗಿಂತಲೂ ಕಮ್ಮಿ ಇಲ್ಲ ಎಂಬುದು ಜಗತ್ತಿಗೆ ಗೊತ್ತಾಗಿದೆ. ಕರೊನಾ ಸಮಯದಲ್ಲಿ ಹಲವು ದೇಶಗಳಿಗೆ ವ್ಯಾಕ್ಸಿನ್ ಕೊಟ್ಟಿದ್ದೇವೆ. ಇಷ್ಟು ಪರಿಣಾಮಕಾರಿ ಔಷಧ ಕಂಡು ಹಿಡಿದಿದ್ದು ಭಾರತ ಮಾತ್ರ. ನೋಡುವ ಭಾವ ಬದಲಾದಾಗಲೇ ವ್ಯವಸ್ಥೆ ಸರಿಯಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಪ್ರಾಂತ ಶಾರೀರಿಕ ಪ್ರಮುಖ ನಾಗೇಶರಡ್ಡಿ, ವಿಭಾಗ ಸಂಘಚಾಲಕ ಹನುಮಂತರಾವ ಪಾಟೀಲ್, ಪ್ರಚಾರಕ ವಿಜಯ ಮಹಾಂತೇಶ, ವ್ಯವಸ್ಥಾ ಪ್ರಮುಖ ಕೃಷ್ಣಾರೆಡ್ಡಿ, ಜಿಲ್ಲಾ ಸಂಘಚಾಲಕ ಶಿವರಾಜ ಹಲಶೆಟ್ಟಿ ಇತರರಿದ್ದರು. ದತ್ತು ತುಪ್ಪದ ನಿರೂಪಣೆ ಮಾಡಿದರು.