ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಾಲಯದ ಆವರಣದಲ್ಲಿ ವಿಹಿಂಪ, ಬಜರಂಗದಳ ಕಾರ್ಯಕರ್ತರು ಗೋವುಗಳಿಗೆ ಪೂಜೆ ಸಲ್ಲಿಸಿದರು. ಆರ್.ಡಿ.ಮಹೇಂದ್ರ, ಅಣ್ಣಪ್ಪ, ಮಹೇಶ್ಚಂದ್ರ, ಸಂದೀಪ್ ಶೆಟ್ಟಿ, ಅಶೋಕ್ ಪೂಜಾರಿ ಇತರರಿದ್ದರು. 
ಜಿಲ್ಲೆ

ಹಿಂದು ಸಂಘಟನೆಗಳಿಂದ ಗೋಪೂಜೆ

ಬಾಳೆಹೊನ್ನೂರು: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದ ವಿವಿಧೆಡೆ ಶನಿವಾರ ಸಂಭ್ರಮದಿಂದ ಗೋಪೂಜೆ ನೆರವೇರಿಸಲಾಯಿತು.

ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು ಗೋಗ್ರಾಸ ಸೇರಿದಂತೆ ವಿವಿಧ ಆಹಾರ ನೀಡಿ ಸಂಭ್ರಮಿಸಿದರು.

ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಮಾತನಾಡಿ, ಹಿಂದು ಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜನೀಯ ಸ್ಥಾನವಿದ್ದು, ಗೋವುಗಳಿಲ್ಲದ ಭಾರತ, ಹಿಂದು ಸಂಸ್ಕೃತಿ ಕಲ್ಪನೆಯೂ ಅಸಾಧ್ಯ. ದೀಪಾವಳಿಯಲ್ಲಿ ಗೋವುಗಳನ್ನು ಪೂಜಿಸಿ ರೈತರು ಕೃತಜ್ಞತಾ ಭಾವ ಹೊಂದುತ್ತಾರೆ ಎಂದರು.

ಬಜರಂಗದಳ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಬಾಳೆಹೊನ್ನೂರು ಪ್ರಖಂಡದ ತಾಲೂಕು ಸಂಯೋಜಕ ಅಣ್ಣಪ್ಪ, ಬಜರಂಗದಳ, ವಿಹಿಂಪ ಕಾರ್ಯಕರ್ತರಾದ ಮಹೇಶ್ಚಂದ್ರ, ಜಗದೀಶ್ಚಂದ್ರ, ರವೀಂದ್ರ ಆಚಾರ್ಯ, ಗುರುಪ್ರಸಾದ್, ಮಂಜು ಹಲಸೂರು, ಸಂದೀಪ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಪವನ್ ಇಟ್ಟಿಗೆ, ಪ್ರಶಾಂತ್ ಇಟ್ಟಿಗೆ, ಅಶೋಕ್ ಪೂಜಾರಿ, ಆಶಾ, ಭೂಮಿಕಾ ಇತರರಿದ್ದರು.