ಕಲಬುರಗಿ: ಉತ್ತರ ಪ್ರದೇಶದ ಪ್ರಯಾಗರಾಜನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಅಖಂಡ ಹಿಂದುರಾಷ್ಟç ಸಂವಿಧಾನ ರಚನೆಯಾಗಿದ್ದು, ಅನಾವರಣಗೊಳಿಸಲಾಗುವುದು ಎಂದು ಕೆಲ ಮಠದ ಪೀಠಾಧಿಪತಿಗಳು ಘೋಷಣೆ ಮಾಡಿರುವದನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರ್ಜುನ ಭದ್ರೆ ಖಂಡಿಸಿದರು.
ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಸರ್ವರಿಗೂ ಸಮಾನ ನ್ಯಾಯ ನೀಡಿದೆ. ಆದರೆ ಆರ್‌ಎಸ್‌ಎಸ್ ಕೇಂದ್ರೀತ ಮನಸ್ಥಿತಿಯವರು ಮನುಸ್ಮÊತಿಯನ್ನು ಪುನಃ ಹೇರಲು ಇಂತಹ ವಿಷಯಗಳನ್ನು ತೇಲಿ ಬಿಟ್ಟು, ಅದನ್ನು ಜಾರಿಗೆ ತರುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ಸಂವಿಧಾನವೂ ಮನುಸ್ಮÊತಿ, ಚಾಣಕ್ಯನ ಅರ್ಥಶಾಸ್ತç, ರಾಮರಾಜ್ಯದ ಕಲ್ಪನೆ ಹೊಂದಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ರಾಮ ಮಂದಿರ ಉದ್ಘಾಟನೆಯೇ ಸ್ವಾತಂತ್ರÈ ದಿನ ಎಂದಿದ್ದಾರೆ. ಹೀಗೆ ಪರಸ್ಪರ ಸಂವಿಧಾನ, ಸ್ವಾತಂತ್ರÈ ಹೋರಾಟದ ಗತಿ ಬದಲಿಸಿ, ಹಿಂದು ರಾಷ್ಟç ಘೋಷಣೆಗೆ ಪ್ರಯತ್ನ ನಡೆದಿದೆ. ಅದಕ್ಕೆ ತಕ್ಕಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವೂ ಹಿಂಬಾಗಿಲ ಮೂಲಕ ಪ್ರಯತ್ನ ನಡೆಸಿದೆ ಎಂದು ಹೇಳಿದರು.
ಹಿಂದು ರಾಷ್ಟç ಸಂವಿಧಾನ ಘೋಷಣೆ ಮಾಡಿದ ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ ಸ್ವರೂಪ ಮಹಾರಾಜ, ಸನಾತನ ಮಂಡಳಿಯ ದೇವಕ್ಕಿ ನಂದನ ಠಾಕೂರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು, ಸ್ವಾತಂತ್ರÈ ದಿನದ ಬಗ್ಗೆ ದ್ವಂದ್ವ ಹೇಳಿಕೆ ನೀಡಿದ ಮೋಹನ್ ಭಾಗವತ್ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಫೆ.೪ರಂದು ರಾಷ್ಟçಪತಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ವೀರಭದ್ರ ತಳವಾರಗೇರ್ ಇದ್ದರು.