ಬಿ.ಶ್ರೀರಾಮುಲು  
ಜಿಲ್ಲೆ

ಹಿಂದು ರಾಷ್ಟ್ರ ಎನ್ನುವ ಸೇರಬೇಕಿತ್ತು

ಬಾಗಲಕೋಟೆ: ಭಾರತದ ಸಂವಿಧಾನದಲ್ಲಿ ಜಾತ್ಯಾತೀಯ ಪದ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಅದನ್ನು ಸೇರಿಸಿದೆ ಎಂದು ಹೇಳಿದ್ದ ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ.ಶ್ರೀರಾಮುಲು ಸಮರ್ಥಿಸಿಕೊಂಡಿದ್ದಾರೆ.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಜಾತ್ಯಾತೀತ ಪದ ಇತ್ತಾ ಎಂದು ಈ ಕಾಂಗ್ರೆಸ್‌ನವರು ತೋರಿಸಲಿ. ಮತಬ್ಯಾಂಕ್‌ಗಾಗಿ ಯಾರನ್ನೋ ಓಲೈಸಲು ಈ ಪದವನ್ನು ಸೇರಿಸುವ ಮೂಲಕ ದೇಶಕ್ಕೆ ಕಳಂಕ ತಂದಿಟ್ಟು ತಮಗೆ ಬೇಕಾದ ಹೊಸ ಹೊಸ ಪದಗಳನ್ನು ಸೇರಿಸಿದ್ದಾರೆ. ಜಾತ್ಯಾತೀತ ಎಂದು ಸೇರಿಸಿದವರು ಭಾರತ ಹಿಂದು ರಾಷ್ಟ್ರಎಂದು ಸೇರಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ್ಯಾರು? ಈ ಬಗ್ಗೆ ಬೇಕಿದ್ದರೆ ಟಿಬೆಟ್ ನಡೆಸಲಿ, ನಾನು ಅದಕ್ಕೆ ಸಿದ್ದನಿದ್ದೇನೆ. ಯಾರನ್ನೋ ಓಲೈಸಲು ಸಂವಿಧಾನದಲ್ಲಿ ಇವರು ಸೇರಿಸಿರುವ ಪದ ತೆಗೆಯಬೇಕು ಎಂದು ಆರ್‌ಎಸ್‌ಎಸ್ ನವರು ಹೇಳಿದ್ದಾರೆ ಎಂದು ಶ್ರೀರಾಮುಲು ಸಮರ್ಥಿಸಿಕೊಂಡರು.