filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5426192, 0.50857145);sceneMode: 5767168;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46; 
ಜಿಲ್ಲೆ

ಹಿಂದು ಮಹಾಗಣಪನ ಪುರ ಪ್ರವೇಶ ಇಂದು

ಚಿತ್ರದುರ್ಗ: ವಿಶ್ವ ಹಿಂದು ಪರಿಷತ್- ಬಜರಂಗದಳದಿಂದ ಈ ಬಾರಿ ಗರುಡಾರೂಢ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಸಮಿತಿ ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಪ್ರಭಂಜನ್ ಹೇಳಿದರು.
ಗಣೇಶನನ್ನು ಪ್ರತಿಷ್ಠಾಪಿಸುವ ನಗರದ ಬಿ.ಡಿ. ರಸ್ತೆ ನಗರದ ಜೈನಧಾಮದ ಪೆಂಡಾಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದರು.
ಅಂದಾಜು 17 ಅಡಿ ಎತ್ತರದ ಗಣೇಶ ವಿಗ್ರಹ ಸೆ.4 ರಂದು ಮಧ್ಯಾಹ್ನ 3 ಗಂಟೆಗೆ ಪುರ ಪ್ರವೇಶಿಸಲಿದೆ. ನಗರದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಪೆಂಡಾಲ್ ತಲುಪಲಿದೆ. ಪೂಜೆ ಬಳಿಕ ಕಲಾ ತಂಡಗಳು, ಮಂಗಳವಾದ್ಯಗಳೊಂದಿಗೆ ವಿಗ್ರಹವನ್ನು ಮೆರವಣಿಗೆ ಮೂಲಕ ಪೆಂಡಾಲ್‌ಗೆ ತರಲಾಗುವುದು.
ಗಣೇಶ ಮಂಟಪಕ್ಕೆ ‘ಧರ್ಮಶ್ರೀ’, ಸಭಾಮಂಟಪಕ್ಕೆ ಕೇಶವ ಹೆಗ್ಡೆ, ವೇದಿಕೆಗೆ ಜ.ರಾ.ರಾಮಮೂರ್ತಿ ಹಾಗೂ ಪೆಂಡಾಲ್‌ನ ಮಹಾ ದ್ವಾರಕ್ಕೆ ರಾಜವೀರ ಮದಕರಿ ನಾಯಕರ ಹೆಸರಿಡಲಾಗಿದೆ. ಶಕ್ತಿ ಸಂಪನ್ನ ಭಾರತ, ಭಾರತೀಯ ಕುಟುಂಬದ ಹಿರಿಮೆ, ಇಂದಿನ ಸವಾಲುಗ ಳು, ಹಿಂದು ಧರ್ಮದ ವಿಶೇಷ, ಶೌರ್ಯ ಪರಂಪರೆ, ಪಂಚ ಪರಿವರ್ತನೆ, ಭಾರತೀಯ ನಾರಿ ನಮ್ಮ ಸಂಸ್ಕೃತಿಯ ರಾಯಭಾರಿ ಕುರಿತ ವಿಚಾರಗಳೆಡೆ ವಿವಿಧ ಚಿಂತಕರು ಉಪನ್ಯಾಸ ನೀಡಲಿದ್ದಾರೆ ಎಂದರು.
ಸಮಿತಿ ಅಧ್ಯಕ್ಷ ಬಿ.ನಯನ್ ಅವರು ಮಾತನಾಡಿ, ಪ್ರತಿಷ್ಠಾಪನಾ ದಿನ ಸೆ.7 ರಿಂದ 21 ದಿನಗಳ ಕಾಲ ನಿತ್ಯ ಸಂಜೆ ದೇಶಭಕ್ತಿ, ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಹಾಗೂ ಉಪನ್ಯಾಸ ಕಾರ‌್ಯಕ್ರಮಗಳಿರುತ್ತವೆ. ಸೆ.23 ರಂದು ನಗರದ ಶಕ್ತಿ ದೇವತೆಗಳ ಆಗಮನವಿರುತ್ತದೆ. 24 ರಂದು ಹೋಮ, ಹವನ ವಿಶೇಷ ಪೂಜೆ ಇರುತ್ತದೆ. 26 ರಂದು ನಗರದಲ್ಲಿ ಬೈಕ್ ರ‌್ಯಾಲಿ ನಡೆಯಲಿದೆ. 28 ರಂದು ನಡೆಯುವ ಬೃಹತ್ ಶೋಭಾ ಯಾತ್ರೆಯನ್ನು ಬಜರಂಗದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯಾ ಅವರ ಉದ್ಘಾಟಿಸಲಿದ್ದಾರೆ. ನಾನಾ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಶೋಭಾಯಾತ್ರೆ ಸಮಯದಲ್ಲಿ ಒಂದು ವೇಳೆ ಡಿಜೆಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡಿದರೆ, ಭಕ್ತಿ ಗೀತೆಗಳನ್ನು ಮಾತ್ರ ಪ್ರಸರಿ ಸಲು ಸಮಿತಿ ಕೋರಿಕೆಯಾಗಿದೆ. ಅಗತ್ಯ ಹಾಡುಗಳನ್ನು ಸಮಿತಿ ಒದಗಿಸಲು ಸಿದ್ಧವಿದೆ ಎಂದರು.
ಅತ್ಯುತ್ತಮ ಗಣೇಶ ಪ್ರತಿಷ್ಠಾಪನೆಗೆ ಬಹುಮಾನ
ಈ ಬಾರಿ ಸಮಿತಿ, ದೇಶಭಕ್ತಿಯೊಂದಿಗೆ ಅತ್ಯುತ್ತಮ ರೀತಿಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಗಣೇಶೋತ್ಸವ ಆಚರಿಸುವ ಜಿಲ್ಲೆಯ 25 ಗಣೇಶೋತ್ಸವ ಸಮಿತಿಗಳಿಗೆ ಬಹುಮಾನ ಕೊಡಲಾಗುವುದು ಎಂದು ಸಮಿತಿ ಮಾರ್ಗದರ್ಶಕ ಟಿ.ಬದ್ರಿನಾಥ್ ಹೇಳಿದರು.
ಕಳೆದ ವರ್ಷ 90 ಲಕ್ಷ ರೂ.ವೆಚ್ಚವಾಗಿದೆ, ಆದರೆ 77 ಲಕ್ಷ ರೂ.ಸಂಗ್ರಹವಾಗಿತ್ತು. ಈ ಬಾರಿಯ ವೆಚ್ಚ ಒಂದು ಕೋಟಿ ರೂ.ಮೀರಲಿದೆ ಎಂದು ಅಂದಾಜಿಸಿದರು. ಪ್ರತಿಯೊಬ್ಬ ದಾನಿಗೂ ಅಧಿಕೃತ ರಸೀದಿ ಕೊಡಲಾಗುತ್ತದೆ. ಉತ್ಸವ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾರ್ವಜನಿಕರು, ದಾನಿಗಳ ಪಾತ್ರ ಹಿರಿದಾಗಿದೆ. ನಿತ್ಯ ಬೆಳಗ್ಗೆ 11.45 ರಿಂದ 12.15 ಹಾಗೂ ಸಂಜೆ 7.45 ರಿಂದ 8.15ರವರೆಗೆ ವಿಶೇಷ ಆರತಿ, ಪೂಜೆ ಇರುತ್ತದೆ. ಕಾರ್ಕಳ ಮತ್ತು ಸಾಗರದ ಕಲಾವಿದರು ಅಂದಾಜು 17 ಲಕ್ಷ ರೂ.ವೆಚ್ಚದಲ್ಲಿ ದಶಾವತಾರ ಮಾದರಿ ಪೆಂಡಾಲ್ ನಿರ್ಮಿಸಿದ್ದಾರೆ ಎಂದರು.
ಸಮಿತಿ ಗೌರವಾಧ್ಯಕ್ಷ ಷಡಾಕ್ಷರಪ್ಪ, ಸಮಿತಿ ಪ್ರಮುಖರಾದ ಸಂದೀಪ್, ಇ.ಅಶೋಕ್, ಜಿ.ಎಸ್.ರಂಗಸ್ವಾಮಿ, ಚನ್ನಕೇಶವ ಇತರರು ಇದ್ದರು.