ಜಿಲ್ಲೆ

ಹಿಂದು ಮಹಾಗಣಪತಿ,ಇಂದು ಪೆಂಡಾಲ್ ಪೂಜೆ


ಚಿತ್ರದುರ್ಗ:ವಿಶ್ವ ಹಿಂದು ಪರಿಷತ್,ಬಜರಂಗದಳದ ನೇತೃತ್ವದಲ್ಲಿ ನಡೆಯುವ 2023ರ ಹಿಂದು ಮಹಾ ಗಣಪತಿ ಮಹೋತ್ಸವದ ಅಂಗವಾಗಿ ಸೆ.3ರಂದು ಬೆಳಗ್ಗೆ 9ಕ್ಕೆ ನಗರದ ಜೈನಧಾಮದ ಆವರಣದಲ್ಲಿ ಪೆಂಡಾಲ್ ಪೂಜೆಯನ್ನು ಆಯೋಜಿಸಲಾಗಿದೆ. ಈ ಭಗವಾಧ್ವ ಜ ಸ್ಥಾಪನೆ ಹಾಗೂ ಗೋ ಪೂಜೆ ನೆರವೇರಲಿದೆ. ಸೆ.18ರಿಂದ ಆಕ್ಟೋಬರ್7ರವರೆಗೆ ಗಣಪತಿ ದರ್ಶನವಿರುತ್ತದೆ. 8ರಂದು ಗಣಪತಿ ವಿ ಸರ್ಜನೆಯ ಅಂಗವಾಗಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ಇರುತ್ತದೆ. ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಅವರ ನೇತೃತ್ವದಲ್ಲಿ ವಿವಿಧ ಕಾರ‌್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.