ಚಿತ್ರದುರ್ಗ: ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಕೋಟೆನಗರಿಯ ಹಿಂದು ಮಹಾಗಣಪತಿ ಮೂರ್ತಿ ಭಾನುವಾರ ಪುರ ಪ್ರವೇಶಿಸುವ ಮೂಲಕ ಪ್ರತಿಷ್ಠಾಪನೆಗೆ ಸಜ್ಜಾಯಿತು.
ವಿಶ್ವ ಹಿಂದು ಪರಿಷದ್, ಬಜರಂಗದಳದಿಂದ ಪ್ರತಿಷ್ಠಾಪಿಸುವ ಮೂರ್ತಿಯೂ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಪ್ರವೇಶಿಸಿದ ವೇಳೆ ನೆರೆದಿದ್ದ ಭಕ್ತರಿಂದ ಹರ್ಷೋದ್ಘಾರ ಮೊಳಗಿದವು.
ಮೂರ್ತಿಗೆ ಶ್ರದ್ಧಾ-ಭಕ್ತಿಯಿಂದ ಮಹಾಮಂಗಳಾರತಿ ನೇರವೇರಿಸಿದ ನಂತರ ಮೈಸೂರು ಅರಮನೆ ಮಾದರಿಯಲ್ಲಿ ನಿರ್ಮಿಸಿರುವ ನಗರದ ಜೈನ್ ಧಾಮದ ಪ್ರತಿಷ್ಠಾಪನಾ ಸ್ಥಳದ ಮಂಟಪಕ್ಕೆ ವಾಹನದ ಮೂಲಕ ಕರೆತರಲಾಯಿತು.
ಇಂದಿನಿಂದ ಸ್ವಾಮಿಗೆ ನಿತ್ಯ ವಿಶೇಷ ಪೂಜೆಯೊಂದಿಗೆ ಚಿಂತಕರಿಂದ ರಾಷ್ಟ್ರಭಕ್ತಿ ಮೂಡಿಸುವ ಉಪನ್ಯಾಸ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹಿಂದು ಮಹಾಗಣಪತಿಯ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಮಾರ್ಗದರ್ಶಕ ಬದ್ರಿನಾಥ್, ಬಜರಂಗದಳ ಪ್ರಾಂತ ಸಹ ಸಂಯೋಜಕ ಪ್ರಭಂಜನ್, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ಸಹ ಕಾರ್ಯದರ್ಶಿ ಕೇಶವ್, ಬಜರಂಗದಳ ಜಿಲ್ಲಾ ಸಂಯೋಜಕ ಅಶೋಕ್, ಪದಾಧಿಕಾರಿಗಳಾದ ಶ್ರೀನಿವಾಸ್, ರಂಗಸ್ವಾಮಿ, ಶ್ರೀನಿವಾಸ್ ಡೈರಿ, ನವೀನ್ ಚಾಲುಕ್ಯ, ನಗರಸಭೆ ಸದಸ್ಯ ಶಶಿಧರ್, ಪ್ರಶಾಂತ್ ಅಪ್ಪಾಜಿ ಪರಿಸರ, ವಿಫುಲ್ ಜೈನ್ ಇತರರಿದ್ದರು.