ಜಿಲ್ಲೆ

ಹಿಂದು ಪದ್ಧತಿ ಸಂರಕ್ಷಿಸಿದ ವೀರ

ಕೂಡ್ಲಿಗಿ: ಹಿಂದು ಸಾಮ್ರಾಜ್ಯ ಸ್ಥಾಪನೆಯಲ್ಲಿ ಛತ್ರಪತಿ ಶಿವಾಜಿ ಅವರ ಕೊಡುಗೆ ಅಪಾರ ಎಂದು ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬುಧವಾರ ಮಾತನಾಡಿದರು. ಅತ್ಯುತ್ತಮ ನಾಯಕತ್ವ, ಆಡಳಿತ ತಂತ್ರಗಳಿಂದ ಶಿವಾಜಿ ಹೆಸರುವಾಸಿಯಾಗಿದ್ದರು. ಶಿವಾಜಿ ಆಳ್ವಿಕೆಯಲ್ಲಿ ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡಲಾಗಿತ್ತು. ಇದು ಅವರ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ. ವಿದೇಶಿ ಆಕ್ರಮಣಗಳ ನಡುವೆಯೂ ಹಿಂದೂ ಪದ್ಧತಿಗಳನ್ನು ಸಂರಕ್ಷಿಸಿದ ಮಹಾನ್ ವೀರರಾಗಿದ್ದಾರೆ. 1674 ರಲ್ಲಿ ಛತ್ರಪತಿಯಾಗಿ ಪಟ್ಟಾಭಿಷೇಕ ಹೊಂದುವ ಮೂಲಕ ಮರಾಠ ಸಾಮ್ರಾಜ್ಯದ ಅಧಿಕೃತ ರಚನೆಗೆ ಶಿವಾಜಿ ಕಾರಣಕರ್ತರಾದರು ಎಂದರು.

ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಪಶ್ಚಿಮ ಭಾರತವನ್ನು ಆಳ್ವಿಕೆಗೆ ತೆಗೆದುಕೊಂಡರು. ಶಿವಾಜಿ ಹೆಸರು ದೇಶದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ನೇತ್ರಾವತಿ ತಿಳಿಸಿದರು.