ಜಿಲ್ಲೆ

ಹಿಂದು ಧರ್ಮದಲ್ಲಿ ಮಹಿಳೆಗೆ ಮಾತೃ ಸ್ಥಾನ

Kodagu

ಗೋಣಿಕೊಪ್ಪ: ಕಾವೇರಿ ಮಹಿಳಾ ಸಮಾಜದಲ್ಲಿ ಬುಧವಾರ ಮಹಿಳಾ ದಿನಾಚರಣೆ ಆಚರಿಸಲಾಯಿತು.


ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಹಿಂದು ಧರ್ಮದಲ್ಲಿ ಮಹಿಳೆಗೆ ಮಾತೃ ಸ್ಥಾನ ನೀಡಲಾಗಿದೆ. ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕುಟುಂಬದ ಅಭಿವೃದ್ಧಿ, ಸಾಮಾಜಿಕ ಕಾಳಜಿಯೊಂದಿಗೆ ದೇಶದ ಅಭಿವೃದ್ಧಿಗೂ ಕೈಜೋಡಿಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತಿದೆ ಎಂದರು.


ಸಮಾಜದ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಪ್ಪ ಮಾತನಾಡಿ, ಸಮಾಜದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನವನ್ನು ಶಾಸಕ ಕೆ.ಜಿ.ಬೋಪಯ್ಯ ನೀಡಿರುವುದು ಸಹಕಾರಿಯಾಗಿದೆ. ಕಟ್ಟಡದ ನವೀಕರಣಕ್ಕೆ ಸಮಾಜದ ಸದಸ್ಯರು ಒಟ್ಟಾಗಿ ಧನ ಸಹಾಯ ನೀಡಿದ ಕಾರಣ ಹೆಚ್ಚು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದರು.


ಸಮಾಜದ ಅಧ್ಯಕ್ಷೆ ಕಟ್ಟೇರ ಉತ್ತರೆ ಅಪ್ಪಚ್ಚು, ಉಪಾಧ್ಯಕ್ಷೆ ಚಂಬಾಂಡ ಲತಾ ಅಕ್ಕಮ್ಮ ಇದ್ದರು. ಸದಸ್ಯರಿಗೆ ವಿವಿಧ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ನವೀಕರಣಗೊಂಡ ಸಮಾಜದ ಕಟ್ಟಡದಲ್ಲಿ ಗಣಪತಿ ಹೋಮ ನಡೆಸುವ ಮೂಲಕ ಕಾರ್ಯ ಚಟುವಟಿಕೆಗೆ ಮತ್ತೆ ಚಾಲನೆ ನೀಡಲಾಯಿತು.