ಕಲಬುರಗಿ: ನಮ್ಮ ದೇವಸ್ಥಾನಗಳು ಹಿಂದು ಧರ್ಮ ರಕ್ಷಣೆಯ ಕೇಂದ್ರಗಳಾಗಬೇಕು. ನಿತ್ಯ ಎಲ್ಲರೂ ದೇವಸ್ಥಾನಕ್ಕೆ ಹೋಗಬೇಕು, ಅಲ್ಲಿಯೇ ಮದುವೆ ಮಾತುಕತೆ, ಹಿರಿಯರಿಂದ ಉಚಿತ ಟ್ಯೂಷನ್ ನಡೆಯಲಿ, ಮನೆಗೆಲಸದವರು ಬೇಕಿದ್ದರೆ ಅಲ್ಲಿಯೇ ನೋಟಿಸ್ ಅಂಟಿಸಿ, ನಿತ್ಯ ಸಂಘಗೀತೆ ಮೊಳಗಲಿ ಎಂದು ಹೈದರಾಬಾದ್‌ನ ವಾಗ್ಮಿ ಮಾಧವಿ ಲತಾ ಸಲಹೆ ನೀಡಿದರು.
ನಗರದ ಕೋಟೆ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ವೇದಿಕೆಯಲ್ಲಿ ಮಂಗಳವಾರ ದಿಕ್ಸೂಚಿ ಭಾಷಣ ಮಾಡಿದ ಅವರು, ಹಿಂದುಗಳ ಎಲ್ಲ ಚಟುವಟಿಕೆಗಳು ಮಂದಿರದಲ್ಲೇ ನಡೆಯಲಿ. ಮಂದಿರ ಹಿಂದುಗಳ ಅಡ್ಡಾ ಆಗಿ ಪರಿವರ್ತನೆ ಆಗಲಿ. ಆಗ ನಮ್ಮನ್ನು ಯಾರಿಂದಲೂ ತಡೆಯಲು ಅಸಾಧ್ಯ. ಇಲ್ಲದಿದ್ದರೆ ಭವಿಷ್ಯದ ಪೀಳಿಗೆಗೆ ಮಾರಕ ಆಗಲಿದೆ ಎಂದು ಹೇಳಿದರು.
ಮಾತೆಯರು ಸಂಸ್ಕೃತಿ ಉಳಿಸಲು ಶ್ರಮಿಸಬೇಕು. ಮಕ್ಕಳಿಗೆ, ಮನೆಯ ಪುರುಷರಿಗೆ ವಾರಕ್ಕೊಮ್ಮೆಯಾದರೂ ಸಾಂಪ್ರದಾಯಿಕ ಉಡುಪು ಧರಿಸಬೇಕು. ತಲೆ ತಗ್ಗಿಸದಂತೆ ಹಿಂದು ಧರ್ಮದ ಘನತೆ ಎತ್ತಿ ಹಿಡಿಯಬೇಕು. ಧರ್ಮ ರಕ್ಷಣೆಗಾಗಿ ಜೀವದ ಭಯ ಬೇಡ. ಜೀವ, ಜೀವನ ಹಿಂದುತ್ವಕ್ಕೆ ಮೀಸಲಾಗಿ ಇಡೋಣ. ಧರ್ಮದ ಬಗ್ಗೆ ಹೆಮ್ಮೆ, ಪ್ರೀತಿ, ವಿಶ್ವಾಸ ಇರಲಿ ಎಂದರು.
ಶಕ್ತಿಯುತ ಅಸ್ತç ಮತ ಮಾರಿಕೊಳ್ಳದಿರಿ: ಹಿಂದುತ್ವದ ಉಳಿವಿಗೆ ನಾವು ಶಸ್ತç ಎತ್ತಬೇಕಿಲ್ಲ. ಸಂಘಟಿತರಾಗಿ ಮತವನ್ನು ಎಚ್ಚರಿಕೆಯಿಂದ ನೀಡಬೇಕು. ಅದನ್ನು ಯಾರಿಗೂ ಮಾರಿಕೊಳ್ಳುವುದು ಬೇಡ. ಹಿಂದು ಶಂಕರ ರುದ್ರನಾಗಬಲ್ಲ, ರಾಮನ ವಾನರನಾಗಬಲ್ಲ, ಕಾಳಿಯ ರೂಪ ಧರಿಸಬಲ್ಲ. ಸದ್ಯ ಮತವೇ ಸಶಕ್ತ ಅಸ್ತçವಿದ್ದು, ಧರ್ಮ, ಕುಟುಂಬ, ಸಂಸ್ಕೃತಿ, ಭವಿಷ್ಯದ ಉಳಿವಿಗಾಗಿ ಹಿಂದುತ್ವಕ್ಕಾಗಿ ಹಿಂದುಗಳನ್ನು ಗೆಲ್ಲಿಸಬೇಕು. ನಮ್ಮ ನಾಯಕ ಸೋತರೆ ಅದು ನಮ್ಮೆಲ್ಲರ ಸೋಲು, ಹಿಂದುತ್ವದ ಸೋಲು ಎಂದು ಅರಿಯಬೇಕು ಎಂದರು.
ಶಾಂತ ಹಿಂದು ಶಸ್ತ್ರ ಎತ್ತಬಲ್ಲ: ಸತ್ಯ, ತೇತ್ರಾಯುಗ, ಕಲಿಯುಗ ಬಂದಿದೆ. ಇನ್ನು ಎಷ್ಟು ದಿನವೆಂದು ಶಾಂತಿಯುತವಾಗಿ ಇರೋಣ. ಎಲ್ಲ ಧರ್ಮದವರು ಶಾಂತಿಯಿಂದ ಜೀವಿಸಲು ಹಿಂದುವಿನಿAದ ಮಾತ್ರ ಸಾಧ್ಯ. ಸರ್ವೇ ಜನಾ ಸುಖಿನೋ ಭವಂತು ಎನ್ನುವ ನಮ್ಮಲ್ಲೂ ಶೌರ್ಯ, ಶಸ್ತç ಎತ್ತುವ ಶಕ್ತಿ ಇದೆ. ಯಾರಿಗೂ ಕೀಳು ಮಾತನಾಡುವುದು ಬೇಡ. ನಾವೇ ೧೩೦ ಕೋಟಿ ಜನರಿದ್ದೇವೆ. ಸಂಘಟಿತರಾಗಿ, ಎಲ್ಲವನ್ನು ಎದುರಿಸೋಣ ಎಂದು ಹೇಳಿದರು.
ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ ಪ್ರಾಸ್ತಾವಿಕ ಮಾತನಾಡಿದರು. ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಮಾಶಾಳದ ಶ್ರೀ ಮರುಳಾಧ್ಯ ಶಿವಾಚಾರ್ಯರು ಮಾತನಾಡಿದರು. ಶಾಸಕ ಬಸವರಾಜ ಮತ್ತಿಮಡು, ಸಮಿತಿ ಗೌರವಾಧ್ಯಕ್ಷ ಸುರೇಶ ಟೆಂಗಳಿ, ಶಿವರಾಜ ಪಾಟೀಲ್ ರದ್ದೇವಾಡಗಿ, ಚಂದು ಪಾಟೀಲ್, ನಿತೀನ್ ಗುತ್ತೇದಾರ್, ಅಮರನಾಥ ಪಾಟೀಲ್, ಡಾ.ಸುಧಾ ಹಾಲಕಾಯಿ, ಮಲ್ಲಿಕಾರ್ಜುನ ಗಂಗಾ, ಸುರೇಶ ಹೆರೂರ, ಶರಣು ಪಪ್ಪಾ, ಸುಮಂಗಲಾ ಚಕ್ರವರ್ತಿ, ಸಿದ್ದಾಜಿ ಪಾಟೀಲ್, ಜಯಶ್ರೀ ಮತ್ತಿಮಡು, ಭಾಗೀರಥಿ ಗುನ್ನಾಪುರ ಇತರರಿದ್ದರು.