ಜಿಲ್ಲೆ

ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ

Hassan


ಹಾಸನ : ರಾಜ್ಯದಲ್ಲಿ ಹಿಂದು ಯುವಕರ ಮೇಲೆ ಪದೇ ಪದೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಹಿಂದು ಜಾಗರಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.

ಅರಸೀಕೆರೆ ಪ್ರವಾಸಿ ಮಂದಿರದ ಆವರಣದಿಂದ ಕೇಸರಿ ಧ್ವಜ ಹಿಡಿದು ಹೊರಟ ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಘೋಷಣೆ ಕೂಗೂತ್ತಾ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಧರಣಿ ನಡೆಸಿದರು. ಇದರಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವಂತಾಯಿತು.


ಹಿಂದು ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಸತೀಶ್ ದಾವಣಗೆರೆ, ಸಂಘಟನೆಯ ನಗರ ಸಂಯೋಜಕ ಮನು ಮಾತನಾಡಿದರು. ಖಾಸಗಿ ವಾಹನ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ರೈತ ಮುಖಂಡ ಮಧು, ನೀರಗುಂದ ಲೋಕೇಶ್, ನಟರಾಜ್, ಕಾರ್ತಿಕ್, ಶ್ರೀನಿವಾಸ್, ಕಿರಣ್, ಗಿರಿಪ್ರಸಾದ್ ಇತರರು ಇದ್ದರು.