ಜಿಲ್ಲೆ

ಹಿಂದಿನ ಜೀವನ ಪದ್ಧತಿಯ ನೆನಪು : ಬಲೇ ಕೆಸರ್ಡ್ ಗೊಬ್ಬುಗ ಕಾರ್ಯಕ್ರಮ ಉದ್ಘಾಟಿಸಿ ಉಮಾನಾಥ ಕೋಟ್ಯಾನ್ ಹೇಳಿಕೆ

ಸೌಮ್ಯ ಆರ್

ಕಿನ್ನಿಗೋಳಿ: ಕಾಲ ಉರುಳಿದಂತೆ ನಮ್ಮ ಮೂಲ ಸಂಸ್ಕೃತಿ ಸಂಸ್ಕಾರಗಳಿಂದ ದೂರವಾಗುತ್ತಿದ್ದೇವೆ, ಇದೀಗ ಕೆಸರು ಗದ್ದೆ ಕ್ರೀಡೋತ್ಸವದ ಮೂಲಕ ಮತ್ತೆ ನಮ್ಮ ಹಿಂದಿನ ಜೀವನ ಪದ್ಧತಿಯನ್ನು ನೆನಪಿಸುವಂತಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ, ಶ್ರೀ ವಿನಾಯಕ ಮಹಿಳಾ ಮಂಡಳಿ ಆಶ್ರಯದಲ್ಲಿ ತೋಕೂರು ಕಂಬಳಬೆಟ್ಟು ಗದ್ದೆಯಲ್ಲಿ ಬಲೇ ಕೆಸರ್ಡ್ ಗೊಬ್ಬುಗ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದ ಸಂದರ್ಭ ಇಂತಹ ಕಾರ್ಯಕ್ರಮಗಳಿಗೆ ಅಕಾಡೆಮಿ ವತಿಯಿಂದ ಅನುದಾನ ನೀಡುತ್ತಿದೆ ಎಂದರು.

ದ.ಕ. ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಕೆಮ್ರಾಲ್ ಪಡುಪಂಬೂರು ಗ್ರಾಪಂ ಉಪಾಧ್ಯಕ್ಷರಾದ ಹೇಮನಾಥ್ ಅಮೀನ್, ಜೈ ತುಳುನಾಡ್ ಸಂಸ್ಥೆ ಅಧ್ಯಕ್ಷ ಉದಯ ಪೂಂಜ, ಉದ್ಯಮಿ ಗೋಪಾಲಕೃಷ್ಣ ಪುನರೂರು, ಕೃಷಿಕ ಇಲಿಯಾಸ್ ತಾಪ್ರೊ, ಚಂಚಲಾಕ್ಷಿ ಕಂಬಳಬೆಟ್ಟು, ಯಕ್ಷಗಾನ ಸಮಿತಿ ಅಧ್ಯಕ್ಷ ಗಣಪತಿ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿದಾಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಪಾರ್ವತಿ ವಂದಿಸಿದರು. ಯಜ್ಞೆಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.