ಜಿಲ್ಲೆ

ಹಿಂದಿ ಭಾಷೆಗಿದೆ ಜನ ಜೋಡಿಸುವ ಶಕ್ತಿ

ಕಲಬುರಗಿ: ಹಿಂದಿ ಭಾಷೆಗೆ ಜನರನ್ನು ಜೋಡಿಸುವ ಶಕ್ತಿಯಿದ್ದು, ಎಲ್ಲರೊಂದಿಗೆ ಸಂಬಂಧ ಬೆಸೆಯುತ್ತದೆ ಎಂದು ಮೌಲಾನಾ ಆಜಾದ್ ವಿಶ್ವವಿದ್ಯಾಲಯದ ಪ್ರೊ.ರಿಷಬ್‌ದೇವ್ ಶರ್ಮಾ ಹೇಳಿದರು.
ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮಕ್ರಮದ ಸಮಾರೋಪದಲ್ಲಿ ಮಾತನಾಡಿ, ಹಿಂದಿ ಹಿಂದೂಸ್ತಾನದ ಭಾಷೆ. ಭಾರತದ ಎಲ್ಲ ರಾಜ್ಯದ ಜನರನ್ನು ಜೋಡಿಸುತ್ತದೆ. ಜತೆಗೆ ಇಲ್ಲಿನ ಬಹುತೇಕ ಜನರು ಹಿಂದಿ ಅರಿತವರಾಗಿz್ದÁರೆ ಎಂದರು.
ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಮಾತನಾಡಿ, ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿರುವ ದಿನವಿದು. ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿಯೂ ಒಂದು, ಹಿಂದಿ ಕಲಿಕೆಗೆ ಆದ್ಯತೆ ನೀಡಬೇಕು. ಕೇವಲ ಇದೊಂದು ಭಾಷೆಯಲ್ಲ, ರಾಷ್ಟಿçÃಯ ಏಕತೆಯ ಸಂಕೇತ. ಅನೇಕ ಶ್ರೇಷ್ಠ ಕವಿಗಳು ಮತ್ತು ಬರಹಗಾರರು ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿz್ದÁರೆ. ನಮ್ಮ ರಾಷ್ಟç ಭಾಷೆಯನ್ನು ಗೌರವಿಸಿ ಉಳಿಸಬೇಕಾಗಿದೆ ಎಂದು ಹೇಳಿದರು.
ಡೀನ್ ಪ್ರೊ.ನಿಶಾತ ಆರೀಫ್ ಹುಸ್ಸೇನಿ ಅಧ್ಯಕ್ಷತೆ ವಹಿಸಿದ್ದರು.
ಹಿಂದಿ ದಿವಸ್ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿ, ಉಪನ್ಯಾಸಕರಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿನಿ ಸುಮಯ್ಯ ಪ್ರಾರ್ಥಿಸಿದರು. ಉರ್ದು ವಿಭಾಗದ ಶ್ರೀನಾಥ ಅನಿಸಿಕೆ ವ್ಯಕ್ತಪಡಿಸಿದರು. ಡಾ.ಮಿಲನ್ ಸ್ವಾಗತಿಸಿ, ಪರಿಚಯಿಸಿದರು. ಡಾ.ಆಫ್ಷನ್ ದೇಶಮುಖ ವರದಿ ಪ್ರಸ್ತುತ ಪಡಿಸಿದರು. ಶಿಫಾ ಸಾಹೇರ್ ಮತ್ತು ಸುಬಿಯಾ ನಿರೂಪಣೆ ಮಾಡಿದರು. ಸಫಾ ಮರ್ಯಮ ವಂದಿಸಿದರು.