ಜಿಲ್ಲೆ

ಹಿಂದವೀ ಸಾಮ್ರಾಟನ ಶಿಲ್ಪ ತಯಾರಿಕೆಗೆ ನಿಂತ ಮುಸ್ಲಿಂ ಕಲಾವಿದರು

ವಿಜಯವಾಣಿ ಸುದ್ದಿಜಾಲ ಕಾರವಾರ

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶಿವಾಜಿ ಜಯಂತಿ ಸಮಾರಂಭದಲ್ಲಿ ಶಿವಾಜಿ ಮಹಾರಾಜರ ಮರಳಿನ ಶಿಲ್ಪ ಗಮನ ಸೆಳೆಯಿತು. ಟ್ಯಾಗೋರ್‌ ಕಡಲ ತೀರದಲ್ಲಿ ನಿರ್ಮಾಣ ಮಾಡಲಾಗಿರುವ ಶಿಲ್ಪವನ್ನು ಸಾವಿರಾರು ಜನ ನೋಡಿ ಸಂತಸಪಟ್ಟರು. ಎಂಟು ಅಡಿ ಎತ್ತರದ ಶಿಲ್ಪ ಇದಾಗಿದ್ದು, ಮೈಸೂರಿನ ಸ್ಯಾಂಡ್ ಮ್ಯೂಸಿಯಂನ ಕಲಾವಿದೆ ಗೌರಿ ಅವರ ತಂಡ ಎರಡು ದಿನದಿಂದ ಶ್ರಮಪಟ್ಟು ಈ ಮರಳು ಶಿಲ್ಪ ತಯಾರಿಸಿದ್ದಾರೆ.
ಗೌರಿ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರೂ ಕಲೆಯ ಸೆಳೆತದಿಂದಾಗಿ ಕಳೆದ 12 ವರ್ಷಗಳಿಂದ ಮರಳು ಶಿಲ್ಪಗಳನ್ನು ಮಾಡುತ್ತಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ರಸ್ತೆಯಲ್ಲಿರುವ ಸ್ಯಾಂಡ್ ಸ್ಕಲ್ಚರ್ ಮ್ಯೂಸಿಯಂ ತುಂಬಾ ಪ್ರಸಿದ್ಧವಾಗಿದೆ. ಗೌರಿ ಅವರು ರಾಷ್ಟ್ರದ ವಿವಿಧೆಡೆ ಮರಳು ಶಿಲ್ಪಗಳನ್ನು ಮಾಡಿದ್ದಾರೆ.
ಮುಸ್ಲಿಂ ಕಲಾವಿದರು:
ಹಿಂದವಿ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರ ಮರಳು ಶಿಲ್ಪ ತಯಾರಿಕೆಗೆ ಗೌರಿ ಅವರ ಜತೆಗೆ ಜಬ್ಬಾರ್ ಹಾಗೂ ಫರಾನ್ ಎಂಬ ಇಬ್ಬರು ಕಾರ್ಯನಿರ್ವಹಿಸುತ್ತಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಕಲೆಗೆ ಜಾತಿ, ಧರ್ಮಗಳ ಬೇಲಿ ಇಲ್ಲ ಎನ್ನುತ್ತಾರೆ. ಕೆಆರ್‌ಎಸ್ ಸಮೀಪದ ಜಬ್ಬಾರ್‌.