ಹಾಸ್ಟೆಲ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಶುಕ್ರವಾರ ಕೊಪ್ಪಳದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಾದ ವೆಂಕಟೇಶ, ಕಿರಣ್, ಗವಿಸಿದ್ದ ಇತರರಿದ್ದರು. 
ಜಿಲ್ಲೆ

ಹಾಸ್ಟೆಲ್‌ಗೆ ಮೂಲ ಸೌಕರ್ಯ ಕಲ್ಪಿಸಿ

ಕೊಪ್ಪಳ: ವಸತಿ ನಿಲಯದಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಗರದ ಮೆಟ್ರಿಕ್ ನಂತರದ ಎಸ್ಟಿ ವಸತಿ ನಿಲಯ ವಿದ್ಯಾರ್ಥಿಗಳು ಶುಕ್ರವಾರ ಹಾಸ್ಟೆಲ್ ಮುಂಭಾಗ ಪ್ರತಿಭಟನೆ ನಡೆಸಿದರು.


ಹಾಸ್ಟೆಲ್‌ನಲ್ಲಿ 450 ವಿದ್ಯಾರ್ಥಿಗಳಿದ್ದು, ಸರಿಯಾದ ಊಟ ನೀಡುತ್ತಿಲ್ಲ. ಅರ್ಧದಷ್ಟು ಜನಕ್ಕೆ ಸರಿಯಾಗಿ ಉಪಾಹಾರ, ಊಟ ಸಿಗುತ್ತಿದೆ. ಉಳಿದವರು ಉಪವಾಸ ಇರುವಂತಾಗಿದೆ.

ಟ್ಯಾಂಕ್‌ನಿಂದ ಪಾಚಿಗಟ್ಟಿದ ನೂರು ಬರುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಸ್ನಾನ, ಶೌಚಗೃಹಗಳಿಲ್ಲ. ಇರುವವು ಸ್ವಚ್ಛವಾಗಿಲ್ಲ. ಸಾಬೂನು, ಕೊಬ್ಬರಿ ಎಣ್ಣೆ ಅಗತ್ಯ ವಸ್ತುಗಳನ್ನು ನಾಲ್ಕು ತಿಂಗಳಿಂದ ನೀಡಿಲ್ಲ. ಸ್ವಂತ ಹಣದಲ್ಲಿ ಖರೀದಿ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ತಕ್ಷಣ ಮೇಲಧಿಕಾರಿಗಳು ಸಮಸ್ಯೆ ಸರಿಪಡಿಸಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ನೀರಿನ ಟ್ಯಾಂಕ್, ಸ್ನಾನ, ಶೌಚಗೃಹಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಸ್ನಾನ, ಶೌಚಗೃಹ ನಿರ್ಮಿಸಬೇಕು.

ಸರ್ಕಾರದಿಂದ ಪೂರೈಕೆಯಾಗುವ ದಿನಬಳಕೆ ವಸ್ತುಗಳನ್ನು ಪ್ರತಿ ತಿಂಗಳು ವಿತರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಖ್ ಅಹಮದಿ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಪರಿಹರಿಸುವ ಭರವಸೆ ನೀಡಿದರು. ವಿದ್ಯಾರ್ಥಿಗಳಾದ ವೆಂಕಟೇಶ, ಕಿರಣ್, ಗವಿಸಿದ್ದ ಇತರರಿದ್ದರು.