ಹಾಸನ: ಕೆಲ ದಿನಗಳ ಹಿಂದೆ ತಿರುಪತಿ ದೇವಸ್ಥಾನದಲ್ಲಿ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣದ ವಿವಾದ ಕೇಳಿಬಂದ ಹಿನ್ನಲೆಯಲ್ಲಿ ಈ ಬಾರಿ ಹಾಸನಾಂಬೆ ದರ್ಶನದ ಸಂದರ್ಭದಲ್ಲಿ ವಿತರಿಸುವ ಲಡ್ಡು ಪ್ರಸಾದವನ್ನು ಈ ವರ್ಷದಿಂದ ಬೆಂಗಳೂರಿನ ಇಸ್ಕಾನ್ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ತಿಳಿಸಿದರು.
ಇದೆ ವೇಳೆ ತಮ್ಮ ಕಛೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದ ಹಾಸನಾಂಬೆ ಬಾಗಿಲು ಅ.24 ರಂದು ತೆರೆಯಲಾಗುವುದು. ಜೊತೆಗೆ ಶ್ರೀ ಸಿದ್ದೇಶ್ವರ ಜಾತ್ರ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಭಕ್ತರಿಗೆ ಕೊಡುವ ಲಾಡು ಬಗ್ಗೆ ಯೋಚಿಸಿ ಸ್ವಚ್ಛತೆ, ಭಕ್ತಿಭಾವದಿಂದ ಕೊಡಲು ಮುಂದಾಗಿದ್ದು, ಈ ವರ್ಷದಿಂದ 300 ರೂ ಕೊಟ್ಟು ಟಿಕೆಟ್ ಪಡೆದವರಿಗೂ ಒಂದು ಲಾಡು ಕೊಡಲಾಗುತ್ತಿದೆ. 1 ಸಾವಿರ ನೀಡಿ ಟಿಕೆಟ್ ಪಡೆದವರಿಗೆ ಎರಡು ಲಡ್ಡು ಕೊಡಲು ನಿರ್ಧರಿಸಲಾಗಿದೆ ಎಂದರು.
ಅದ್ದೂರಿ ಜಾತ್ರೆ ಉದ್ದೇಶದಿಂದ ಹೂವಿನ ಅಲಂಕಾರ, ನಗರ ಸೌಂದರ್ಯಿಕರಣ ಎಲ್ಲದರ ಬಗ್ಗೆಯೂ ವಿಶೇಷ ಗಮನ ಹರಿಸಲಾಗಿದೆ.
ಇಸ್ಕಾನ್ ಸಂಸ್ಥೆಗೆ ಲಾಡು ತಯಾರಿಕೆ ಜವಾಬ್ದಾರಿ ವಹಿಸುವ ಕುರಿತು ಅಂತಿಮ ನಿರ್ಣಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಪ್ರಕಟಿಸಲಾಗುವುದು ಎಂದು ಹೇಳಿದರು.
ತಿರುಪತಿ ತಿಮಪ್ಪನ ಭಕ್ತರಿಗೆ ವಿತರಿಸುವ ಲಾಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಮಿಶ್ರಣವಾಗಿದೆ ಎಂಬ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದ್ದು,ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ತೀವ್ರ ಮಳೆಯಿಂದ 271 ಮನೆ ಆಗಿದ್ದು, 56 ಕೊಟ್ಟಿಗೆ ಹಾನಿಯಾಗಿದ್ದು, ಒಟ್ಟು 861 ಹೆಕ್ಟೆರ್ ನಷ್ಟು ಕೃಷಿ ಬೆಳೆ ಹಾನಿ ಆಗಿದೆ. 445 ತೊಟಗಾರಿಕೆ ಬೆಳೆ ಆಗಿದೆ. ವಿವಿದ ನಗರ ಮತ್ತು ಗ್ರಾಮಗಳ ಕಡೆ ರಸ್ತೆ ಹಾಳಾಗಿದೆ ಎಂದು ಹೆಚ್ಚಿನ ಮಳೆಯಿಂದ ಆದ ಹಾನಿ ಬಗ್ಗೆ ಮಾಹಿತಿ ನೀಡಿದರು.