ಹಾಸನ : ಹಾಸನದ ಅಧಿ ದೇವತೆ ಹಾಸನಾಂಬ ದೇವಿಯ ಜಾತ್ರೆಯೂ ಪ್ರತೀ ವರ್ಷದಂತೆ ಈ ವರ್ಷವು ಅದ್ಧೂರಿಯಾಗಿ ನಡೆಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ದೇವರ ದರ್ಶನಕ್ಕೆ ಆಗಮಿಸಲು 1000 ರೂ. ಗಳನ್ನು ಕೊಟ್ಟು ಸಾವಿರಾರು ಭಕ್ಯಾದಿಗಳ ದಂಡು ಆಗಮಿಸುತ್ತಿದೆ. ಮೂರು ನಾಲ್ಕು ವರ್ಷಗಳ ಹಿಂದೆ ಸಾಮಾನ್ಯವಾಗಿ ನಡೆಯುತ್ತಿದೆ ದೇವಿಯ ಜಾತ್ರೆ ಇದೀಗ ಸಾವಿರಾರು ಭಕ್ತರು ಆಗಮಿಸುವವರೆಗೂ ತನ್ನ ಮಹಿಮೆಯನ್ನು ತೋರಿದ್ದು, ದೇವಾಲಯಕ್ಕೆ ಲಕ್ಷಗಟ್ಟಲೆ ಆದಾಯ ಬರುವಂತೆ ಮಾಡಿದೆ . ಅಲ್ಲೆ ವ್ಯಾಪಾರಗಾರರಿಗೆ ವ್ಯಾಪಾರವಾಗುವಂತೆ ಮಾಡಿದೆ ದೇವಿಯ ಮಹೋತ್ಸವವನ್ನು ಅರಿತು ಸಾಕಷ್ಟು ವ್ಯಾಪಾರಿಗಳು ವ್ಯಾಪಾರಮಾಡಲು ದೇವಾಲಯದ ಸುತ್ತ ವಿವಿದ ರೀತಿಯ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ .
2 ವರ್ಷಗಳಿಂದ ಕೋವಿಡ್ ಸಮಸ್ಯೆಯಿಂದ ಸಾರ್ವಜನಿಕ ಭಕ್ತಾಧಿಗಳಿಗೆ ಅವಕಾಶ ಇರಲಿಲ್ಲ ಆದ್ದರಿಂದ ದೇವಾಲಯದ ಸುತ್ತ ಅಂಗಡಿ ಮಳಿಗೆಗಳನ್ನು ಇಟ್ಟಲು ಬಿಡದ ಕಾರಣ ವ್ಯಾಪಾರಗಾರಿಗೆ ಬಾರಿ ನಷ್ಟ ಉಂಟಾಗಿತ್ತು .ಆದರೆ ಈ ಬಾರಿ ಜಾತ್ರೆ ಮಹೋತ್ಸದಲ್ಲಿ ವಿವಿದ ರೀತಿಯ ಗೊಂಬೆ ಅಂಗಡಿಗಳು , ಹೆಣ್ಣು ಮಕ್ಕಳ ಅಲಂಕಾರಿಕ ವಸ್ತುಗಳು ಬಳೆ, ಸರ ವಿವಿದ ರೀತಿಯ ಒಡವೆ, ಚರ್ಮದ ಬ್ಯಾಗ್ , ಮಣ್ಣಿನ ದೀಪಗಳ ಜೊತೆಗೆ ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳು, ಮಕ್ಕಳಿಗೆ ಬೇಕಾದ ಬಣ್ಣ ಬಣ್ಣದ ಬಲೂನುಗಳು ಜೀಪ್ ಕಾರು ವಿವಿದ ರೀತಿಯ ಆಟ ಸಾಮಾನುಗಳು, ಅಲ್ಲಲ್ಲಿ ಜನರು ನಿಂತು ದೇವಾಲಯವನ್ನು ನೋಡುತ್ತ ತಿನ್ನಲು ಬಾಯಲ್ಲಿ ನೀರುರಿಸುವ ಚರ್ಮುರಿ, ಬಜ್ಜಿ, ಗೋಬಿ, ಪಾನಿಪೂರಿಯಂತಹ ಅಂಗಡಿಗಳು ಮನೆಯಲ್ಲಿ ಜಾತ್ರೆಗೆ ಹೋಗಿದ್ದೆ ಎಂದು ತೋರಿಸಲು ಜಾತ್ರೆಯ ಪುರಿ-ಕಾರ, ಸಿಹಿತಿನಿಸುಗಳು ಮಾರಾಟ ಮಾಡುತ್ತಿದ್ದು ಈ ಬಾರಿ ವಿವಿದೆಡೆಯಿಂದ ವ್ಯಾಪಾರಿಗಳು ಆಗಮಿಸಿ ಜೋರಾಗಿ ವ್ಯಾಪಾರ ಮಾಡುತ್ತಿದ್ದು ಜಾತ್ರೆಗೆ ಕಳೆ ತಂದಿದೆ.
ಜಾತ್ರೆ ಉತ್ಸವ ಎಂದರೆ ಕೆಲವರಿಗೆ ದೇವರನ್ನು ಕಾಣುವ ಸಂತೋಷ ಆದರೆ ಇನ್ನು ಕೆಲವರಿಗೆ ಜೀವನವನ್ನು ನಡೆಸುವ ಒಂದು ದಾರಿ. ಜಾತ್ರೆ ಹಾಗೂ ಮಹೋತ್ಸವವನ್ನೇ ಆಧರಿಸಿ ಜೀವನ ನಡೆಸುತ್ತಿರುವವರು ಇದ್ದಾರೆ. ಜಾತ್ರೆಯಲ್ಲಿ ಚಪ್ಪಲಿ ಕಾಯುವವುರಿಂದ ಹಿಡಿದು ವಸ್ತುಗಳನ್ನು ಮಾರಾಟ ಮಾಡುವವರು ತಮ್ಮ ದಿನನಿತ್ಯದ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.
ಅಲ್ಲದೆ ಈ ಬಾರಿ ದೇವಾಲಯದ ಬಳಿ ಹೆಚ್ಚಾಗಿ ಪಿಂಗಾಣಿ ಹಾಗು ಮಣ್ಣಿನಿಂದ ಮಾಡಿದ ವಸ್ತುಗಳು ಹೆಚ್ಚಾಗಿವೆ. ದೀಪಾವಳಿ ಹಬ್ಬ ಸಮೀಪ ಇರುವುದರಿಂದ ಜಾತ್ರೆಯಲ್ಲಿ ಮಣ್ಣಿನಿಂದ ಮಾಡಿದ ದೀಪಗಳು ಹೆಚ್ಚಾಗಿ ವ್ಯಾಪಾರವಾಗುತ್ತಿದೆ ಜನರು ಆಕರ್ಷಿಣಿಯವಾಗಿರುವ ದೀಪಗಳನ್ನು ಆರಿಸಿಕೊಳ್ಳತಿದ್ದಾರೆ. ಈ ಬಾರಿಯ ಜಾತ್ರೆಯಲ್ಲಿ ವ್ಯಾಪಾರಿಗಳ ವ್ಯಾಪಾರ ಜೋರಾಗಿದ್ದು ವ್ಯಾಪಾರಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
‘‘ಕಳೆದ 20 ವರ್ಷಗಳಿಂದ ಹಾಸನಾಂಬೆ ದೇವಿ ಜಾತ್ರೆಯಲ್ಲಿ ಅಂಗಡಿ ಹಾಕುತ್ತಿದ್ದು, ಕಳೆದ 2 ವರ್ಷ ಕೋವಿಡ್ ಸೋಂಕಿನಿಂದ ಲಾಕ್‌ಡೌನ್ ಆಗಿತ್ತು ಆದ್ದರಿಂದ ವ್ಯಾಪಾರಕ್ಕೆ ಹೊಡೆತ ಬಿದ್ದು ಬಾರಿ ನಷ್ಟ ಉಂಟಾಗಿತ್ತು . ಈ ಬಾರಿ ದೇವಿಯ ಮಹಿಮೆಯಿಂದ ಹಾಗೂ ದೇವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿರುವುದರಿಂದ 2 ಪಟ್ಟು ವ್ಯಾಪಾರವಾಗುತ್ತಿದೆ . ಆದರೆ ಮಧ್ಯ ಮಧ್ಯ ಮಳೆ ಬಂದು ಸಮಸ್ಯೆ ಉಂಟಾಗುತಿದ್ದು ವ್ಯಾಪಾರದಲ್ಲಿ ಸ್ವಲ್ಪಮಟ್ಟದ ಸಮಸ್ಯೆ ಉಂಟಾಗುತ್ತಿದೆ.’’
‘‘ನಾವು ಬಂಡವಾಳವನ್ನು ಹಾಕಿ ವಸ್ತುಗಳನ್ನು ತೆಗೆದುಕೊಂದು ಬಂದು ಮಾರಾಟ ಮಾಡುತ್ತೇವೆ ಯಾವುದೇ ಗ್ರಾಮಗಳಲ್ಲಿ ಅಥವಾ ನಗರಗಳಲ್ಲಿ ಜಾತ್ರೆ ಹಬ್ಬಗಳು ನಡೆದರೆ ಅಲ್ಲಿ ಅಂಗಡಿ ಇಟ್ಟುಕೊಂಡು ಮಾರಾಟ ಮಾಡುತಿದ್ದು, ಇದರಿಂದ ನಮಗೆ ಲಾಭ ಅಷ್ಟಾಗಿ ಆಗುವುದಿಲ್ಲ ಆದರೆ ಈ ಬಾರಿ ಬಹಳ ಮಣ್ಣಿನ ದೀಪಗಳು ವ್ಯಾಪಾರವಾಗುತ್ತಿವೆ 3 ದೀಪಗಳಿಗೆ 10 ರೂ. ಗಳಂತೆ ಮಾರಾಟ ಮಾಡುತ್ತಿದ್ದೆವೆ ಆಗಾಗ ಬಾರಿ ಮಳೆ ಬರುತ್ತಿದ್ದು ವ್ಯಾಪಾರಕ್ಕೆ ಸಮಸ್ಯೆಯಾಗುತ್ತಿದೆ ಮಳೆ ನಿಂತಲ್ಲಿ ಉತ್ತಮ ವ್ಯಾಪಾರ.’’-ಮೀನಾಕ್ಷಿ, ಪಿಂಗಾಣಿ ದೀಪ ಮಾರಾಟಗಾರರು, ಬೆಂಗಳೂರು.