ಜಿಲ್ಲೆ

ಹಾಸನ ಕಾಂಗ್ರಸ್ ಕಚೇರಿಯಲ್ಲಿ ಧ್ರುವನಾರಾಯಣ್ ಗೆ ಶ್ರದ್ದಾಂಜಲಿ

ಹಾಸನ : ಮಾಜಿ ಸಂಸದ, ಕೆಪಿಸಿಸಿ ಕಾರ್ಯಾದ್ಯಕ್ಷ ಹಾಗೂ ಹಾಸನ ಜಿಲ್ಲೆಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಶನಿವಾರ ಮುಂಜಾನೆ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ.ಎಚ್.ಲಕ್ಷ್ಮಣ್ ಮಾತನಾಡಿ, ಧ್ರುವನಾರಾಯಣ್ ಅವರ ಅಕಾಲಿಕಾ ಮರಣದಿಂದ ಕಾಂಗ್ರೆಸ್ ಪಕ್ಷವು ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ. ಅವರ ನಿಧನದ ಸುದ್ದಿ ತಿಳಿದು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ತೀವ್ರಸಂಪಾಪ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಮಾಧ್ಯಮ ವಕ್ತಾರ ದೇವರಾಜೇಗೌಡ ಮಾತನಾಡಿ ಧ್ರುವನಾರಾಯಣ್ ಅವರು ಜಿಲ್ಲೆಯ ಉಸ್ತುವಾರಿಯನ್ನ ವಹಿಸಿಕೊಂಡು ಪಕ್ಷ ಸಂಘಟಿಸುವಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದರು ಅವರ ನಿಧನ ಜಿಲ್ಲಾ ಕಾಂಗ್ರೆಸ್‌ಗೆ ತೀವ್ರ ನಷ್ಟವನ್ನುಂಟು ಮಾಡಿದೆ ಎಂದರು.

ದಲಿತ ಸಮುದಾಯದ ಪ್ರಾಮಾಣಿಕ ಕಾರ್ಯಕರ್ತರಾಗಿ ಪಕ್ಷ ಸಂಘಟಿಸುತ್ತಾ, ಶಾಸಕರಾಗಿ, ಸಂಸದರಾಗಿಯು ಕೂಡ ಕೆಲಸ ಮಾಡಿದ್ದರು ಅವರ ನಿಧನದಿಂದ ಇಡೀ ರಾಜ್ಯ ಕಾಂಗ್ರೆಸ್‌ಗೆ ಅತೀವ ನಷ್ಟ ಉಂಟಾಗಿದೆ ಎಂದು ಕಂಬನಿ ಮೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ಮಲ್ಲಿಗೆವಳು ದ್ಯಾವಪ್ಪ, ನಾಯಕರಹಳ್ಳಿ ಅಶೋಕ್, ಮಂಜುನಾಥ್ ಶರ್ಮಾ, ಶಿವಕುಮಾರ್, ಜಯರಾಂ ಇತರರು ಇದ್ದರು.