ಜಿಲ್ಲೆ

ಹಾವೇರಿ ಜಿಲ್ಲೆಯಲ್ಲಿ 58 ಜನರಿಗೆ ಸೋಂಕು ದೃಢ

ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ ನಾಗಾಲೋಟ ಮುಂದುವರಿದಿದ್ದು, ಶುಕ್ರವಾರ ಅಬಕಾರಿ ಇಲಾಖೆಯ ಇಬ್ಬರು ನೌಕರರು, ಗ್ರಾಮಲೆಕ್ಕಾಧಿಕಾರಿ, ನರ್ಸ್, ಪುರಸಭೆ ನೌಕರ ಸೇರಿ 58 ಜನರಿಗೆ ಸೋಂಕು ದೃಢಪಟ್ಟಿದೆ. ಓರ್ವ ವೃದ್ಧ ಮೃತಪಟ್ಟಿದ್ದಾರೆ. 26 ಜನ ಗುಣವಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 660ಕ್ಕೇರಿದ್ದು, 251 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 388 ಜನರು ಗುಣವಾಗಿ ಬಿಡುಗಡೆಗೊಂಡಿದ್ದರೆ, 21 ಜನ ಮೃತಪಟ್ಟಿದ್ದಾರೆ.

ಹಾನಗಲ್ಲ ತಾಲೂಕಿನ 8, ಶಿಗ್ಗಾಂವಿ, ರಾಣೆಬೆನ್ನೂರ ತಾಲೂಕಿನ ತಲಾ 6 ಜನ, ಹಿರೇಕೆರೂರ ತಾಲೂಕಿನ 5, ಹಾವೇರಿ ತಾಲೂಕಿನ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ.

ರಾಣೆಬೆನ್ನೂರ ಮೃತ್ಯುಂಜಯ ನಗರದ ನಿವಾಸಿ ಅಬಕಾರಿ ಇಲಾಖೆಯ ಎಫ್​ಡಿಸಿಯಾಗಿದ್ದ 32 ವರ್ಷದ ಪುರುಷ, ರಾಜರಾಜೇಶ್ವರಿ ನಗರದ ನಿವಾಸಿ ಹಾಗೂ ಅಬಕಾರಿ ಇಲಾಖೆಯ ನೌಕರಳಗಾಗಿದ್ದ 31 ವರ್ಷದ ಮಹಿಳೆ, ಎಕೆಎಸ್ ಕಾಲನಿಯ 20 ವರ್ಷದ ಯುವಕ, ಇಸ್ಲಾಂಪುರ ಓಣಿಯ 29 ವರ್ಷದ ಪುರುಷ, ಗಣೇಶ ನಗರದ 4ನೇ ಕ್ರಾಸ್​ನ 24 ವರ್ಷದ ಮಹಿಳೆ, ಮೇಡ್ಲೇರಿಯ 24 ವರ್ಷದ ಗರ್ಭಿಣಿ, ಮೈದೂರಿನ 25 ವರ್ಷದ ಗರ್ಭಿಣಿ, ಅಸುಂಡಿಯ 22 ವರ್ಷದ ಯುವಕ, ತುಮ್ಮಿನಕಟ್ಟಿಯ 33 ವರ್ಷದ ಮಹಿಳೆ, ಸುಣಕಲ್ಲಬಿದರಿಯ 21 ವರ್ಷದ ಯುವತಿ, ಕಾಕೋಳದ 24 ವರ್ಷದ ಮಹಿಳೆ, ನಿಟ್ಟೂರ ಗ್ರಾಮದ 18 ವರ್ಷದ ಯುವಕ, 48 ವರ್ಷದ ಪುರುಷ, 25, 44, 42ವರ್ಷದ ಮಹಿಳೆ, ಹಲಗೇರಿಯ 65 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ. ಹಾನಗಲ್ಲ ತಾಲೂಕು ಅಕ್ಕಿಆಲೂರಿನ ಮಾರುತಿ ನಗರದಲ್ಲಿದ್ದ ಕರಗುದರಿಯ 30 ವರ್ಷದ ಗ್ರಾಮಲೆಕ್ಕಾಧಿಕಾರಿ, ಹಳ್ಳೂರ ಓಣಿಯ 38 ವರ್ಷದ ಮಹಿಳೆ, ಮಾಸನಕಟ್ಟಿಯ 22 ವರ್ಷದ ಮಹಿಳೆ, ಕಮತಗೇರಿಯ 25 ವರ್ಷದ ಮಹಿಳೆ, 19 ವರ್ಷದ ಯುವತಿ, ಅರಳೇಶ್ವರ ಗ್ರಾಮದ 36 ವರ್ಷದ ಪುರುಷ, ಅಕ್ಕಿವಳ್ಳಿ ಪ್ಲಾಟ್​ನ 31 ವರ್ಷದ ಮಹಿಳೆ, ಮುಗದೂರ ಗೌಡ್ರ ಓಣಿಯ 24 ವರ್ಷದ ಪುರುಷ, ಮಲ್ಲಿಗಾರ ಗ್ರಾಮದ 24 ವರ್ಷದ ಮಹಿಳೆ, ಗುಡ್ಡದಮತ್ತಿಹಳ್ಳಿಯ 13 ವರ್ಷದ ಬಾಲಕಿ, ಆರೇಗೊಪ್ಪದ 31 ವರ್ಷದ ಮಹಿಳೆ, 39 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ ತಾಲೂಕು ನೀರಲಗಿ ಗ್ರಾಮದ 62 ವರ್ಷದ ವೃದ್ಧ, 66 ವರ್ಷದ ವೃದ್ಧೆ, 7 ವರ್ಷದ ಬಾಲಕಿ, ಗುತ್ತಲದ ಅಜ್ಜನಮಠದ ಸಮೀಪದ 80 ವರ್ಷದ ವೃದ್ಧ, ಹಾವೇರಿ ಸರ್ಕಾರಿ ವಸತಿಗೃಹ ನಿವಾಸಿ 29 ವರ್ಷದ ಜಿಲ್ಲಾಸ್ಪತ್ರೆ ಶುಶ್ರೂಷಕ, ಮೆಹಬೂಬ ನಗರದ 23 ವರ್ಷದ ಮಹಿಳೆ, ಕಬ್ಬೂರ ಗ್ರಾಮದ ಬಳಿಯ ಹೊಸೂರತಾಂಡಾದ 20 ವರ್ಷದ ಯುವತಿ, ದೇವಗಿರಿ ಗ್ರಾಮದ ತರಕಾರಿ ವ್ಯಾಪಾರಿ 34 ವರ್ಷದ ಪುರುಷ, ಹೊಸಕಿತ್ತೂರ ಗ್ರಾಮದ 23 ವರ್ಷದ ಯುವತಿಗೆ ಸೋಂಕು ತಗುಲಿದೆ.

ಬ್ಯಾಡಗಿಯ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದ 32 ವರ್ಷದ ಮಹಿಳೆ, 1 ವರ್ಷದ ಗಂಡು ಮಗು, ಹಿರೇಹಳ್ಳಿಯ 55 ವರ್ಷದ ಪುರುಷ, ಕಳಗೊಂಡದ 41 ವರ್ಷದ ಮಹಿಳೆ, 9 ವರ್ಷದ ಬಾಲಕ, ಶಿಡೇನೂರ ಗ್ರಾಮದ 61 ವರ್ಷದ ವೃದ್ಧ, ಬ್ಯಾಡಗಿ ಪಟ್ಟಣದ ಬಸವೇಶ್ವರ ನಗರದ 23 ವರ್ಷದ ಬಿಎಎಂಎಸ್ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ.

ಸವಣೂರ ತಾಲೂಕು ಹತ್ತಿಮತ್ತೂರ ಗ್ರಾಮದ 65 ವರ್ಷದ ವೃದ್ಧೆ, ಚಿಲ್ಲೂರಬಡ್ನಿಯ 28 ವರ್ಷದ ಮಹಿಳೆ, ಡೊಂಬರತ್ತೂರಿನ 27 ವರ್ಷದ ಯುವಕ, 18 ವರ್ಷದ ಯುವಕ, ಸವಣೂರ ಪಟ್ಟಣದ 33 ವರ್ಷದ ಪುರುಷ, 7 ವರ್ಷದ ಬಾಲಕಿ, 9 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಶಿಗ್ಗಾಂವಿ ಪಟ್ಟಣದ ಮೆಹಬೂಬ ನಗರದ 52 ವರ್ಷದ ಮಹಿಳೆ, ಸವಣೂರ ಪಟ್ಟಣದ ಪುರಸಭೆ ನೌಕರ, ಅಂಬೇಡ್ಕರ್ ನಗರದಲ್ಲಿ ವಾಸವಾಗಿದ್ದ 46 ವರ್ಷದ ಪುರುಷ, ಸಾಯಿನಗರದ ಬಿಂದಲೆ ಓಣಿಯ 16 ವರ್ಷದ ಬಾಲಕಿ, ಅಂದಲಗಿಯ 60 ವರ್ಷದ ವೃದ್ಧೆಗೆ ಹಾಗೂ ಹಿರೇಕೆರೂರ ತಾಲೂಕು ಮಾಸೂರಿನ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ.