ಹಾವೇರಿ: ಪಿಡಿಒ, ಆಶಾ ಕಾರ್ಯಕರ್ತೆ, ಪೊಲೀಸ್, ನರ್ಸ್, ನ್ಯಾಯಾಂಗ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ ಮಂಗಳವಾರ 110 ಜನರಿಗೆ ಕರೊನಾ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದರೆ, 55 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 2,635 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 1,715 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 59 ಜನರು ಮೃತಪಟ್ಟಿದ್ದಾರೆ. ಒಟ್ಟು 861 ಸಕ್ರಿಯ ಪ್ರಕರಣಗಳಿದ್ದು, 459 ಸೋಂಕಿತರು ಹೋಂ ಐಸೋಲೇಷನ್ನಲ್ಲಿ, 404 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ತಾಲೂಕುವಾರು ಸೋಂಕಿತರ ವಿವರ: ಹಾವೇರಿ ತಾಲೂಕಿನಲ್ಲಿ ಮಂಗಳವಾರ 40, ರಾಣೆಬೆನ್ನೂರ 25, ಹಿರೇಕೆರೂರ 16, ಹಾನಗಲ್ಲ 11, ಬ್ಯಾಡಗಿ ಹಾಗೂ ಸವಣೂರ ತಲಾ 6, ಶಿಗ್ಗಾಂವಿ ತಾಲೂಕಿನಲ್ಲಿ 5 ಹಾಗೂ ಗದಗ ಜಿಲ್ಲೆ ಲಕ್ಷೆ್ಮೕಶ್ವರದ ಒಬ್ಬರು ಸೇರಿ 110 ಜನರಿಗೆ ಸೋಂಕು ದೃಢಪಟ್ಟಿದೆ.
ಗುಣವಾದವರ ವಿವರ: ಶಿಗ್ಗಾಂವಿ ತಾಲೂಕಿನ 20, ರಾಣೆಬೆನ್ನೂರ 15, ಹಾವೇರಿ 8, ಹಾನಗಲ್ಲ 7, ಸವಣೂರ 4, ಹಿರೇಕೆರೂರ ತಾಲೂಕಿನ ಒಬ್ಬರು ಸೇರಿ ಒಟ್ಟು 55 ಜನ ಗುಣವಾಗಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಮೂವರ ಸಾವು
ಶಿಗ್ಗಾಂವಿ ಪಟ್ಟಣದ 38 ವರ್ಷದ ಪುರುಷ ಆ. 16ರಂದು ಶಿಗ್ಗಾಂವಿ ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಿಗ್ಗಾಂವಿ ತಾಲೂಕು ಬನ್ನೂರಿನ 60 ವರ್ಷದ ಪುರುಷ ಆ. 17ರಂದು ಹಾಗೂ ರಾಣೆಬೆನ್ನೂರ ನಗರದ 49 ವರ್ಷದ ಪುರುಷ ಆ. 16ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಮೂವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.