ಬೀರೂರಿನಲ್ಲಿ ವೃದ್ಧ ದಂಪತಿ ರಾಜಪ್ಪ ಮತ್ತು ದೇವಕಮ್ಮ ಅವರನ್ನು ಕೆ.ಆರ್.ಪೇಟೆಯ ಮಾತೃಭೂಮಿ ವೃದ್ಧಾಶ್ರಮಕ್ಕೆ ಕಳುಹಿಸಿಕೊಡಲಾಯಿತು. ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್, ಟಿ.ಜಿ.ಮಂಜುನಾಥ್, ಶರತ್ ಇತರರಿದ್ದರು.  
ಜಿಲ್ಲೆ

ಹಾವೇರಿ ಗುತ್ತಲ ದಂಪತಿ ವೃದ್ಧಾಶ್ರಮಕ್ಕೆ

ಬೀರೂರು: ಪಟ್ಟಣದ ಹಿರಿಯಂಗಳ ರಸ್ತೆಯ ಮನೆಯೊಂದರಲ್ಲಿ ಮೂರು ತಿಂಗಳಿನಿಂದ ವಾಸವಿದ್ದ ಹಾವೇರಿ ಜಿಲ್ಲೆ ಗುತ್ತಲ ಗ್ರಾಮ ಮೂಲದ ವೃದ್ಧ ದಂಪತಿ ರಾಜಪ್ಪ ಮತ್ತು ದೇವಕಮ್ಮ ಅವರನ್ನು ಬುಧವಾರ ಮಂಡ್ಯ ಜಿಲ್ಲೆ ಕೆ.ಆರ್.ನಗರದ ಮಾತೃಭೂಮಿ ವೃದ್ಧಾಶ್ರಮಕ್ಕೆ ತರೀಕೆರೆ ಪುರಸಭೆ ಸದಸ್ಯ ಟಿ.ಜಿ.ಮಂಜುನಾಥ್, ಬೀರೂರು ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಕಳುಹಿಸಿಕೊಟ್ಟರು.

ಇಬ್ಬರು ಪುತ್ರರು ಇದ್ದರೂ ಪೋಷಣೆ ಮಾಡದ ಕಾರಣ ದಂಪತಿ ಮನೆ ಬಿಟ್ಟು ಬಂದಿದ್ದು, ಊರೂರು ಅಲೆಯುತ್ತ ಕೆಲಸ ಸಿಕ್ಕ ಕಡೆ ವಾಸಿಸುತ್ತ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬರುತ್ತಿದ್ದರು. ಪಟ್ಟಣದಲ್ಲಿ ಶಿವಕುಮಾರ್, ಶರತ್ ಎಂಬುವರ ಮನೆಯಲ್ಲಿ ವೃದ್ಧ ದಂಪತಿಗೆ ಆಶ್ರಯ ನೀಡಿದ್ದರು. ದಂಪತಿ ಅಡಕೆ ಕೊಯ್ಲು ಇತರ ಕೆಲಸ ಮಾಡಿಕೊಂಡಿದ್ದರು. ವೃದ್ಧ ದಂಪತಿ ವಾಪಸ್ ಮನೆಗೆ ಹೋಗಲು ಒಪ್ಪದಿದ್ದರಿಂದ ಟಿ.ಜಿ.ಮಂಜುನಾಥ್ ಅವರು ಕೆ.ಆರ್.ನಗರದ ಮಾತೃಭೂಮಿ ವೃದ್ಧಾಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸ್ಥಳೀಯ ಸೋಮಶೇಖರ್ ಇದ್ದರು. ಇಂತಹ ವೃದ್ಧರು ಕಂಡರೆ ಅಥವಾ ಮಾಹಿತಿ ಇದ್ದರೆ ವೃದ್ಧಾಶ್ರಮ ಅಥವಾ ಆಶ್ರಯ ತಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ದೂರವಾಣಿ ಸಂಖ್ಯೆ : 9964376319 ಸಂಪರ್ಕಿಸಬಹುದು ಟಿ.ಜಿ.ಮಂಜುನಾಥ್ ತಿಳಿಸಿದ್ದಾರೆ.