ಹಾಲು ನೀಡುವ ಮೇಕೆ ಜೊತೆ ಜಮಖಂಡಿಯ ಶಿಕ್ಷಕರ ಕಾಲೋನಿಯಲ್ಲಿ ಪರಶುರಾಮ ಭಜಂತ್ರಿ ಹಾಗೂ ಸ್ನೇಹಿತ ಹನಮಂತ ಗೊಲ್ಲರ  
ಜಿಲ್ಲೆ

ಹಾಲು ಕರೆಯುತ್ತಿರುವ ಗಂಡು ಆಡಿನ ಮರಿ...!

ಬಾಗಲಕೋಟೆ: ಮೂರು ವರ್ಷದ ಗಂಡು ಮೇಕೆಯೊಂದು ಹಾಲು ಕರೆಯುತ್ತಿರುವುದು ಸಾರ್ವಜನಿಕರನ್ನು ಅಚ್ಚರಿ ಮೂಡಿಸಿದ ಘಟನೆ ಗುರುವಾರ ಜಮಖಂಡಿಯ ಶಿಕ್ಷಕರ ಕಾಲೋನಿಯಲ್ಲಿ ನಡೆದಿದೆ. ಪರಶುರಾಮ ಭಜಂತ್ರಿ ಎನ್ನುವವರಿಗೆ ಸೇರಿದ ಗಂಡು ಮೇಕೆಯು ನಿತ್ಯ ಒಂದು ಬಟ್ಟಲಿನಷ್ಟು ಹಾಲು ಕರೆಯುತ್ತಿದೆ. ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಪ್ರಕೃತಿ ವಿಸ್ಮಯಕ್ಕೆ ಎಲ್ಲರೂ ಸೋಜಿಗರಾಗಿದ್ದಾರೆ.