ಸಾಲಿಗ್ರಾಮ: ತಾಲೂಕು ಎಲೆಮುದ್ದನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಸಂಘದ ಆವರಣದಲ್ಲಿ ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ಎಲೆಮುದ್ದನಹಳ್ಳಿ ದೋರೇಶ್ 164 ಮತ, ಎಲೆ ಮುದ್ದನಹಳ್ಳಿ ವಿರೂಪಾಕ್ಷ 140 ಮತ, ಬಾಚಳ್ಳಿ ಸ್ವಾಮಿ 136 ಮತ, ಎಲೆಮುದ್ದನಹಳ್ಳಿಕೊಪ್ಪಲು ಪುಟ್ಟಸ್ವಾಮಿಗೌಡ 120 ಮತ, ಎಲೆಮುದ್ದನಹಳ್ಳಿ ಉದಯಕುಮಾರ್ 116 ಮತ, ರಾಜಮ್ಮ ಎಲೆ ಮುದ್ದನಹಳ್ಳಿ ಕೊಪ್ಪಲು 156 ಮತ, ಶೋಭಾ ಬಾಚಳ್ಳಿ 146 ಮತ. ಎಲೆ ಮುದ್ದನಹಳ್ಳಿ ಚಂದ್ರಮ 151ಮತ ಹಾಗೂ ಬಾ ತಳ್ಳಿ ವೆಂಕಟೇಶ್ 147 ಮತಗಳನ್ನು ಪಡೆದು ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರವಿ ಘೋಷಣೆ ಮಾಡಿದರು.
ಡೇರಿ ಕಾರ್ಯದರ್ಶಿ ಚಂದ್ರಪ್ಪ ಅಂಗಡಿ ನಾಗೇಶ್, ಪುಟ್ಟಸ್ವಾಮಿಗೌಡ, ನಿಂಗೇಗೌಡ, ಜಯರಾಮ್, ಖಾಲಿ ಹರೀಶ್, ಪಟೇಲ್ ಹರೀಶ್, ಭರತ್ ಇನ್ನಿತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.