ಚನ್ನೇಗೌಡನ ದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಶಂಕರಚಾರಿ ಅವಿರೋಧವಾಗಿ ಆಯ್ಕೆಯಾದರು. ಚನ್ನಪ್ಪ, ನಾಗರಾಜ್, ರಾಜೇಶ್ವರಿ ಸಿದ್ದಪ್ಪ, ಕವಿತಾಜಯರಾಮ್, ಜಯಲಕ್ಷ್ಮೀ ಇದ್ದರು.  
ಜಿಲ್ಲೆ

ಹಾಲು ಉತ್ಪಾದಕರ ಸಂಘಕ್ಕೆ ಅವಿರೋಧ ಆಯ್ಕೆ

ಮದ್ದೂರು: ತಾಲೂಕಿನ ಚನ್ನೇಗೌಡನದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತರಾದ ಎಸ್.ಎಸ್.ಮಹೇಶ್ ಅಧ್ಯಕ್ಷರಾಗಿ, ಶಂಕರಚಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸೋಮವಾರ ಸಂಘದ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಇಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪಾರ್ವತಮ್ಮ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕರಾದ ಚಿಕ್ಕೂನು, ಕವಿತಾ ಜೈರಾಮ್, ಜಯಲಕ್ಷ್ಮೀ ನಾಗರಾಜ್, ರಾಜೇಶ್ವರಿ ಸಿದ್ದಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಂಚಲಿಂಗಯ್ಯ, ಮುಖಂಡರಾದ ಪಾಪಣ್ಣ, ಮಹೇಶ್, ತಮ್ಮಣ್ಣ, ನಾಗಣ್ಣ, ಸಿದ್ದರಾಮು ಇದ್ದರು.