ಕೆ.ಆರ್.ಸಾಗರ: ಸಮೀಪದ ಚಿಕ್ಕಾಯರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಸಾಮಾನ್ಯ ಪ್ರ-ವರ್ಗಕ್ಕೆ ನಡೆದ ಚುನಾವಣೆಗೆ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ ನಮಿತಾ, ಮಹದೇವಮ್ಮ, ಸುಶೀಲಮ್ಮ, ಗೌರಮ್ಮ, ಪ್ರಭಾವತಿ, ಶೋಭಾ, ಭಾಗ್ಯಾ, ರತ್ನ ಅವರು ಅಧಿಕ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆಂದು ಚುನಾವಣಾಧಿಕಾರಿ ಶೋಭಾ ಘೋಷಣೆ ಮಾಡಿದರು.
ಚುನಾಣೆಯಲ್ಲಿ ವಿಜೇತರಾದವರನ್ನು ತಾಲೂಕು ವೀರಶೈವ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಚಿಕ್ಕಾಯರಹಳ್ಳಿ ನಿರಂಜನ ಬಾಬು, ಮೋಹನ್, ವೆಂಕಟೇಶ್, ಪುಟ್ಟಣ ಸೇರಿದಂತೆ ಹಲವು ಮುಖಂಡರು ಅಭಿನಂದಿಸಿದ್ದಾರೆ.