ಜಿಲ್ಲೆ

ಹಾಲಿಗೆ ಕಲಬೆರಕೆ ಮಾಡಬೇಡಿ

ಕೆ.ಆರ್.ಪೇಟೆ: ರೈತರು ತಾವು ಕರೆದ ಹಾಲನ್ನು ಯಾವುದೇ ಕಲಬೆರಕೆ ಮಾಡದೆ ಸಂಘಕ್ಕೆ ಸರಬರಾಜು ಮಾಡಿದರೆ ಸಂಘವು ಉತ್ತಮ ಮಟ್ಟಕ್ಕೆ ಬೆಳೆಯುವುದರ ಜತೆಗೆ ಉತ್ಪಾದಕರಿಗೂ ಹೆಚ್ಚು ಆದಾಯ ದೊರೆಯುತ್ತದೆ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಕೆ.ರವಿ (ಡಾಲು ರವಿ) ಹೇಳಿದರು.


ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಮತ್ತು ಬಳ್ಳೇಕೆರೆ ಹಾಲು ಉತ್ಪಾದಕರ ಸಹಕಾರ ಸಂಘಗಳ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಬುಧವಾರ ಮಾತನಾಡಿದರು.


ಹಾಲಿಗೆ ಯಾವುದೇ ವಸ್ತುಗಳನ್ನು ಮಿಶ್ರಣ ಮಾಡಿದರೂ ಅದನ್ನು ಕಂಡುಹಿಡಿಯುವ ಯಂತ್ರ ಈಗಾಗಲೇ ಮಾರುಕಟ್ಟೆಗೆ ಬಂದಿದೆ. ಯಾವುದೇ ಕಾರಣಕ್ಕೂ ಹಾಲನ್ನು ಕಲಬೆರಕೆ ಮಾಡಬೇಡಿ. ಮಾಡಿದರೆ ಆಹಾರ ಸುರಕ್ಷತಾ ಕಾಯ್ದೆಯ ಅನ್ವಯ ಜೈಲುಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿಗಳಾದ ಗುರುರಾಜ್, ರೀತನ್, ಸಂಘದ ಅಧ್ಯಕ್ಷ ಬೋರೇಗೌಡ, ಪವಿತ್ರಾ, ಅಂಕಪ್ಪ, ಉಪಾಧ್ಯಕ್ಷ ಕುಮಾರ್, ಶೈಲಜಾ ಮಂಜುನಾಥ್, ಕಾರ್ಯದರ್ಶಿಗಳಾದ ಜಾಗಿನಕೆರೆ ಅಶೊಕ್, ಕಮಲಾ ನಾಗರಾಜು, ಸಂಘದ ನಿರ್ದೇಶಕರಾದ ಕೃಷ್ಣೇಗೌಡ, ಜವರೇಗೌಡ, ಕಾಂತರಾಜು, ಜವರೇಗೌಡ, ಲತಾ, ಗೌರಮ್ಮ, ಪುಟ್ಟಮ್ಮ, ಪಾರ್ವತಿ, ಜಯಶೀಲಮ್ಮ, ನೇತ್ರಾವತಿ, ವಿಶಾಲಾಕ್ಷಮ್ಮ, ಸುಧಾಮಣಿ, ಜಗದಾಂಬಾ, ಅನುಪಮಾ, ರುಕ್ಮಿಣಮ್ಮ, ರಾಜಮ್ಮ, ಮೀನಾಕ್ಷಿ, ಕಮಲಮ್ಮ, ಹಾಲು ಪರೀಕ್ಷಕಿ ಭವ್ಯಾ, ನರಸಿಂಹಶೆಟ್ಟಿ, ಸಹಾಯಕ ಹರೀಶ್, ಸಹಾಯಕಿ ಸುಶೀಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಮತ್ತು ಬಳ್ಳೇಕೆರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಕೆ.ರವಿ (ಡಾಲು ರವಿ) ಉದ್ಘಾಟಿಸಿದರು. ಗುರುರಾಜ್, ರೀತನ್, ಬೋರೇಗೌಡ, ಪವಿತ್ರಾ, ಅಂಕಪ್ಪ, ಕುಮಾರ್, ಶೈಲಜಾ ಮಂಜುನಾಥ್ ಇತರರಿದ್ದರು.