ಯಾದಗಿರಿ: ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ಬುಧವಾರ ದಸರಾ ಹಬ್ಬವನ್ನು ಅತ್ಯಂತ ಶ್ರದ್ಧೆ-ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ನಡೆದ ಸರಪಳಿ ಹರಿಯುವ ಕಾರ್ಯಕ್ರಮದಲ್ಲಿ ಗ್ರಾಮದ ನಿಂಗಪ್ಪ ಪೂಜಾರಿ ಸರಪಳಿ ಹರಿಯುವುದರೊಂದಿಗೆ ಸಂಭ್ರಮದ ಹಬ್ಬದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಗ್ರಾಮದ ಶಿಬಿರ ಮಲ್ಲಯ್ಯನ ಕಟ್ಟೆಯ ಬಳಿಯ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬ ಆರಂಭಿಸಲಾಯಿತು. ಗ್ರಾಮದಲ್ಲಿನ ಸರ್ವ ದೇವತೆಗಳಿಗೆ ನೈವೇದ್ಯ ಅಪರ್ಿಸಲಾಯಿತು. ಹನುಮಾನ್ ದೇವಸ್ಥಾನದ ಆವರಣದಲ್ಲಿ ಸರಪಳಿ ಹರಿಯುವ ಕಾರ್ಯಕ್ರಮ ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗಿತು. ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತಿಭಾವ ಮೆರೆದರು.
ಗ್ರಾಮದ ಶೇ. 80ರಷ್ಟು ಮನೆಗಳಲ್ಲಿ ದೇವರ ಮೂತರ್ಿಯನ್ನು ಹೊಂದಿದ್ದ ಗ್ರಾಮದಲ್ಲಿ ಹಲವು ಮಂದಿರಗಳಿವೆ. ಸುತ್ತಲಿನ ನೂರು ಹಳ್ಳಿಗಳಲ್ಲಿ ದೇವರ ಹಾಲಗೇರಾ ವೆಂದರೆ ಪ್ರಸಿದ್ದವಾದ ಈ ಗ್ರಾಮದಲ್ಲಿ ದಸರಾ ಹಬ್ಬ ಅತ್ಯಂತ ಸಂಭ್ರಮದಿಂದ ಜರುಗಲಿದ್ದು, ಇದರಿಂದ ಈ ಗ್ರಾಮವೂ ಸುತ್ತಲಿನ ಗ್ರಾಮಗಳಿಗೆ ಇದು ದೇವರ ಹಾಲಗೇರಾ ಎಂದೇ ಖ್ಯಾತಿ ಪಡೆದಿದೆ. ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸಂಭ್ರಮವಿರಲಿ ಎನ್ನುವ ದೃಷ್ಠಿಯಿಂದ ದಸರಾ ವೈಭವಕ್ಕೆ ಕಳೆ ತರಲು ಮನೆ ಮನೆಯಿಂದ ದೇವರ ಪಲ್ಲಕ್ಕಿಯನ್ನು ಹೊತ್ತು ಎಲ್ಲಾ ದೇವರ ಪಲ್ಲಕ್ಕಿಗಳನ್ನು ಹೊತ್ತವರು ಸೇರಿದಂತೆ ಎಲ್ಲರಿಂದ ವಿಜಯದಶಮಿ ದಿನ ರಾತ್ರಿ ಬನ್ನಿ ಮುಡಿಯಲು ಶಿಬಿರ ಮಲ್ಲಯ್ಯನ ಕಟ್ಟೆ ಹತ್ತಿರ ವಿರುವ ಬನ್ನಿಗಿಡಕ್ಕೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.