ಜಿಲ್ಲೆ

ಹಾರಗದ್ದೆ ವಿಎಸ್ಸೆಸ್ಸೆನ್‌ಗೆ ಅಧ್ಯಕ್ಷ ಆಯ್ಕೆ

ಆನೇಕಲ್: ತಾಲೂಕಿನ ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರಭಾಕರ್ ಬಾಬು ಉಪಾಧ್ಯಕ್ಷೆಯಾಗಿ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಂ.ಶಶಿ ತಿಳಿಸಿದರು.

ಅಧ್ಯಕ್ಷ ಪ್ರಭಾಕರ್ ಬಾಬು ಮಾತನಾಡಿ, ಪಂಚಾಯಿತಿ ವತಿಯಿಂದ ಸಿಎ ಸೈಟ್‌ಅನ್ನು ಪಡೆದುಕೊಂಡು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುವಂತ ಸೌಲಭ್ಯಗಳನ್ನು ವಿಎಸ್ಸೆಸ್ಸೆನ್ ಬ್ಯಾಂಕ್‌ನಲ್ಲೂ ಲಭ್ಯವಾಗುವಂತೆ ಮಾಡಿ, ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನಷ್ಟು ಖಾತೆಗಳನ್ನು ತೆರೆದು ಬ್ಯಾಂಕ್‌ನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸುತ್ತೇನೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನವಾಗುತ್ತಿದ್ದು, ಗ್ರಾಮಸ್ಥರಿಗೆ ಇಲ್ಲಿಯೇ ಖಾತೆ ತೆರೆದು ವಹಿವಾಟು ನಡೆಸುವಂತೆ ಮನವಿ ಮಾಡಿ ಬ್ಯಾಂಕ್‌ನ ನಿವ್ವಳ ಲಾಭವನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದರು.

ಮಾಜಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಹಿಂದೆ ನನ್ನ ಅಧ್ಯಕ್ಷತೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ, ಹಿರಿಯ ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ಬಸವರಾಜು, ಕೆ.ಎಸ್ ನಟರಾಜುರವರು ಸ್ಥಳೀಯವಾಗಿ ಸಹಕಾರ ಸಂಘ ಅಭಿವೃದ್ಧಿ ಮಾಡಲು ಸಹಕಾರ ನೀಡಿದ್ದು, ಅದೇ ರೀತಿ ಮುಂದೆ ಬರುವ ಆಡಳಿತ ಮಂಡಳಿ ಉತ್ತಮವಾದ ಅಡಳಿತವನ್ನು ನೀಡಲಿ ಎಂದರು.

ವಿಎಸ್ಸೆಸ್ಸೆನ್ ಬ್ಯಾಂಕ್ ನಿರ್ದೇಶಕರಾದ ಕೆ.ಮಹೇಶ್, ಪಿ.ಧನಂಜಯ್, ಎಚ್.ಆರ್.ಪ್ರಭಾಕರ್.ಬಿ ಮುನಿರಾಜು, ಎಂ.ರಮೇಶ್ ರೆಡ್ಡಿ, ಎನ್.ರುಕ್ಮಿಣಿಯಮ್ಮ, ಕೆ.ಆರ್.ಅಶ್ವತ್ಥ್‌ಪ್ಪ, ಸಿ.ಗೋಪಾಲ್, ಎಂ.ಯಲ್ಲಪ್ಪ ಮತ್ತು ರುದ್ರಪ್ಪನವರಿಗೆ ಸನ್ಮಾನಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ಬಸವರಾಜು, ಕೆ.ಎಸ್.ನಟರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ನೊಸೇನೂರು ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶ್ರೀದರ್, ಸಂಪಂಗಿ ಮತ್ತಿತರರಿದ್ದರು.