ಬಸವಕಲ್ಯಾಣ: ಹಾರಕೂಡ ಗ್ರಾಮದಲ್ಲಿ ಶ್ರೀ ಸದ್ಗುರು ಚೆನ್ನಬಸವ ಶಿವಯೋಗಿಗಳವರ ೭೩ನೇ ಜಾತ್ರೋತ್ಸವ ಜ.೪ರಿಂದ ೬ರವರೆಗೆ ವೈಭವಪೂರ್ಣವಾಗಿ ಆಚರಿಸಲಾಗುತ್ತಿದೆ. ೪ರಂದು ಬೆಳಗ್ಗೆ ೮ಕ್ಕೆ ಅಭಿಷೇಕ, ಸಂಜೆ ೪ಕ್ಕೆ ಪಲ್ಲಕಿ ಉತ್ಸವ, ೬ಕ್ಕೆ ಅದ್ದೂರಿ ರಥೋತ್ಸವ ಹಾಗೂ ೭ಕ್ಕೆ ಶಿವಾನುಭವ ಚಿಂತನ ಕಾರ್ಯಕ್ರಮ ಜರುಗಲಿದೆ.
ಧಾರವಾಡ ಶ್ರೀ ಮುರಘಾಮಠದ ಶ್ರೀ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ, ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನೇತೃತ್ವ, ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಂಸದ ಸಾಗರ ಖಂಡ್ರೆ ಸಮಾರಂಭ ಉದ್ಘಾಟಿಸಲಿದ್ದು, ಸಿಎಂ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್, ಶಾಸಕರಾದ ಶರಣು ಸಲಗರ, ಡಾ.ಸಿದ್ಧಲಿಂಗಪ್ಪ ಪಾಟೀಲ್, ಬಸವರಾಜ ಮತ್ತಿಮಡು, ವಿಧಾನ ಪರಿಸತ್ ಸದಸ್ಯರಾದ ಎಂ.ಜಿ.ಮುಳೆ, ಡಾ.ಚಂದ್ರಶೇಖರ್ ಪಾಟೀಲ್, ಜಗದೇವ ಗುತ್ತೇದಾರ್, ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ.ಬಿ.ನಾರಾಯಣರಾವ, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಲಗುರ್ತಿಯ ಶಿವರಾಜ ಅಣ್ಣಾರಾವ ಪಾಟೀಲ್ ಹಾಗೂ ಬಸವಕಲ್ಯಾಣದ ಜಗದೀಶ ಶಾಂತಪ್ಪ ಚಿರಡೆ ಅವರನ್ನು ಸತ್ಕರಿಸಲಾಗುವುದು.
ಕುಸ್ತಿ ಪ್ರದರ್ಶನ: ಭಾನುವಾರ ಮಧ್ಯಾಹ್ನ ೨ಕ್ಕೆ ಜಂಗಿ ಪೈಲ್ವಾನ್‌ರ ಥೇಟರ್ ಕುಸ್ತಿ ಪ್ರದರ್ಶನ ನಡೆಯಲಿದ್ದು, ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನೇತೃತ್ವ, ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ, ಮಳಖೇಡನ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಮ್ಮುಖ, ಮಾಜಿ ಸಚಿವ ರಾಜಶೇಖರ ಪಾಟೀಲ್ ಅಧ್ಯಕ್ಷತೆ, ಮಾಜಿ ಸಂಸದ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಂಎಲ್ಸಿ ಭೀಮರಾವ ಪಾಟೀಲ್, ಮಾಜಿ ಸಚಿವರಾದ ಬಸವರಾಜ ಪಾಟೀಲ್ ಅಟ್ಟೂರ್, ರೇವುನಾಯಕ ಬೆಳಮಗಿ, ಮಾಜಿ ಶಾಶಕರಾದ ಸುಭಾಷ ಗುತ್ತೇದಾರ್, ಮಲ್ಲಿಕಾರ್ಜುನ ಖೂಬಾ, ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಎಂಎಲ್ಸಿ ವಿಜಯಸಿಂಗ್, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಕಾಂಗ್ರೆಸ್ ಮುಖಂಡ ಬಾಬು ಹೊನ್ನಾನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಸೋಮವಾರ ಪಶು ಪ್ರದರ್ಶನ ಹಾಗೂ ಉತ್ತಮ ತಳಿಗಳಿಗೆ ಬಹುಮಾನ ವಿತರಿಸಲಾಗುವುದು.
ಬಸವ ಭಾನು ಪ್ರಶಸ್ತಿ: ಶನಿವಾರ ಸಂಜೆ ನಡೆಯುವ ಶಿವಾನುಭವ ಚಿಂತನ ಸಮಾರಂಭದಲ್ಲಿ ಧಾರವಾಡ ಶ್ರೀ ಮುರಘಾಮಠದ ಶ್ರೀ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರಿಗೆ ಬಸವ ಭಾನು ಪ್ರಶಸ್ತಿಯನ್ನು ಹಾರಕೂಡ ಸಂಸ್ಥಾನ ಹಿರೇಮಠದಿಂದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿ ಗೌರವಿಸುವರು.