ಬಸವಕಲ್ಯಾಣದಲ್ಲಿ ಸೆ.೨೨ರಿಂದ ನಡೆಯಲಿರುವ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮಸಭೆಯ ಆಮಂತ್ರಣ ಪತ್ರಿಕೆಯನ್ನು ಹಾರಕೂಡ ಶ್ರೀಮಠದಲ್ಲಿ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಬಿಡುಗಡೆಗೊಳಿಸಿದರು. ಶಾಸಕ ಶರಣು ಸಲಗರ, ದಯಾನಂದ ಶೀಲವಂತ, ಜಗನ್ನಾಥ ಪಾಟೀಲ ಮಂಠಾಳ, ಸುಭಾಷ ಮುರುಡ, ಸೂರ್ಯಕಾಂತ ಸಂಗೋಳಗಿ, ಎ.ಜಿ.ಪಾಟೀಲ ಇತರರಿದ್ದರು. 
ಜಿಲ್ಲೆ

ಹಾರಕೂಡ ಶ್ರೀಮಠ ಧರ್ಮ-ದಾಸೋಹದ ತವರು

ಬಸವಕಲ್ಯಾಣ: ನಾಡಿನಲ್ಲಿ ವಿಶೇಷ ಹಾಗೂ ವಿಶಿಷ್ಟವಾದ ಧರ್ಮಕಾರ್ಯ ಹಾಗೂ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀಮಠವೆಂದರೆ ಹಾರಕೂಡ ಮಠ ಎಂದು ಶಾಸಕ ಶರಣು ಸಲಗರ ಬಣ್ಣಿಸಿದರು.

ಹಾರಕೂಡ ಶ್ರೀಮಠದಲ್ಲಿ ರಂಭಾಪುರಿ ಜಗದ್ಗುರುಗಳಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಅದ್ಬುತ ವ್ಯಕ್ತಿತ್ವ ಉಳ್ಳವರಾಗಿದ್ದು, ಇಂತಹ ಯತಿವರ್ಯರನ್ನು ಪಡೆದ ಭಕ್ತರು ಧನ್ಯರು. ಶ್ರೀಗಳ ಗೌರವಾಧ್ಯಕ್ಷತೆಯಲ್ಲಿ ಸೆ.೨೨ರಿಂದ ಅ.೨ರವರೆಗೆ ಶರನ್ನವರಾತ್ರಿ ಧರ್ಮ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ೫ ದಿನದ ದಾಸೋಹ ಹಾರಕೂಡ ಶ್ರೀಮಠದಿಂದ ನಡೆಯುತ್ತಿರುವುದು ಪೂಜ್ಯರ ದಾಸೋಹ ಪ್ರೇಮಕ್ಕೆ ನಿದರ್ಶನ. ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ , ಧರ್ಮಸಂಸ್ಕಾರ ನೀಡುವ ಉದ್ದೇಶದಿಂದ ಆಯೋಜಿಸಿರುವ ಧರ್ಮ ಸಮ್ಮೇಳನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.

ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸ್ವಾಗತ ಸಮಿತಿ ಪದಾಧಿಕಾರಿಗಳಾದ ದಯಾನಂದ ಶೀಲವಂತ, ಜಗನ್ನಾಥ ಪಾಟೀಲ ಮಂಠಾಳ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಸುಭಾಷ ಮುರುಡ, ಸೂರ್ಯಕಾಂತ ಸಂಗೋಳಗಿ, ಎ. ಜಿ.ಪಾಟೀಲ, ಸಂಗಣ್ಣ ಪಾಟೀಲ ಅರಿ ಜಂಬಗಾ, ಸೂರ್ಯಕಾಂತ ಶೀಲವಂತ, ಚಂದ್ರಶೇಖರ ಪಾಟೀಲ, ಪಂಡಿತರಾವ ಮಾಲಿ ಪಾಟೀಲ, ವೀರಣ್ಣ ಶೀಲವಂತ, ಚಂದ್ರಶೇಖರ ಪಾಟೀಲ ಇತರರಿದ್ದರು. ರಮೇಶ ರಾಜೋಳೆ ಪ್ರಾಸ್ತಾವಿಕ ಮಾತನಾಡಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.