ಜಿಲ್ಲೆ

ಹಾನಿ ಅನುಭವಿಸಿದ ಗ್ರಾಹಕರಿಗೆ ಪರಿಹಾರ ನೀಡಿ

ಕಾರವಾರ: ಅಡುಗೆ ಸಿಲಿಂಡರ್ ಸ್ಪೋಟಗೊಂಡ ಪ್ರಕರಣಗಳಿಗೆ ಸಂಬಂಧಿಸಿ ಗ್ರಾಹಕರಿಗೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಎರಡು ಗ್ಯಾಸ್ ಏಜೆನ್ಸಿಗಳಿಗೆ ಆದೇಶ ನೀಡಿದೆ.

ಅಡುಗೆ ಅನಿಲ ಪೂರೈಕೆ ಏಜೆನ್ಸಿಗಳು ಅಥವಾ ಡೀಲರ್​ಗಳು ಗ್ರಾಹಕರಿಗೆ ನೀಡುವ ಪ್ರತಿ ಅಡುಗೆ ಸಿಲಿಂಡರ್ ಮೇಲೆ ಇನ್ಶ್ಶೂರೆನ್ಸ್ ಹೊಂದಿರಬೇಕು. ಅವಘಡಗಳ ಸಂದರ್ಭದಲ್ಲಿ ಇನ್ಶ್ಶೂರೆನ್ಸ್ ಮೂಲಕ ಗ್ರಾಹಕರಿಗೆ ಪರಿಹಾರ ನೀಡಬೇಕು. ಅದು ಸಾಧ್ಯವಿಲ್ಲದಿದ್ದಲ್ಲಿ ಹಾನಿ ಪರಿಹಾರಕ್ಕೆ ಏಜೆನ್ಸಿಗಳೇ ನೇರ ಹೊಣೆ ಎಂದು ನ್ಯಾಯಾಲಯ ಅಭಿಪ್ರಾಯ ದಾಖಲಿಸಿದೆ.

ಕುಮಟಾದ ತಂಡ್ರಕುಳಿಯ ನಾರಾಯಣ ಗಣಪತಿ ಅಂಬಿಗ ಎಂಬುವವರ ಮನೆಯಲ್ಲಿ 2017ರಲ್ಲಿ ಅಡುಗೆ ಸಿಲಿಂಡರ್ ಸ್ಪೋಟವಾಗಿ ಫ್ರಿಜ್, ಟಿವಿ ಸೇರಿ ಹಲವು ವಸ್ತುಗಳಿಗೆ ಹಾನಿಯಾಗಿತ್ತು. 5 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಸಿಲಿಂಡರ್ ಪೂರೈಕೆ ಮಾಡಿರುವ ಕುಮಟಾದ ಚೈತ್ರದೀಪ ಎಂಟರ್ ಪ್ರೖೆಸಸ್ ಹೊಂದಿರುವ ಇನ್ಶ್ಶೂರೆನ್ಸ್ ಬಳಸಿಕೊಂಡು ತಮಗೆ ಪರಿಹಾರ ನೀಡಬೇಕು ಎಂದು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಅಡುಗೆ ಅನಿಲ ಕಂಪನಿ ಇಂಡಿಯನ್ ಆಯ್್ಲ ಕಾಪೋರೇಷನ್ ಹಾಗೂ ಇನ್ಶ್ಶೂರೆನ್ಸ್ ಕಂಪನಿ ವಿರುದ್ಧವೂ ದಾವೆ ಹೂಡಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ಪ್ರಕಾಶ ಕೆ. ಹಾಗೂ ಸದಸ್ಯ ನಜೀರ್ ಶೇಖ್ ಅವರು ತೀರ್ಪು ಪ್ರಕಟಿಸಿದ್ದಾರೆ. ಆಯ್್ಲ ಕಂಪನಿ ಹಾಗೂ ಇನ್ಶ್ಶೂರೆನ್ಸ್ ಕಂಪನಿಯನ್ನು ಆರೋಪ ಮುಕ್ತ ಮಾಡಿದ್ದಾರೆ. ಗ್ರಾಹಕನಿಗೆ ಹಾನಿಯಾದ 4.5 ಲಕ್ಷ ರೂ.ಗಳನ್ನು ಶೇ.8 ರ ಬಡ್ಡಿಯೊಂದಿಗೆ ಚೈತ್ರದೀಪ ಎಂಟರ್ ಪ್ರೖೆಸಸ್ ನೀಡಬೇಕು. ಅಲ್ಲದೆ, ವ್ಯಾಜ್ಯದ ಖರ್ಚು ಎಂದು ಹೆಚ್ಚುವರಿಯಾಗಿ 5 ಸಾವಿರ ರೂ. ನೀಡಬೇಕು ಎಂದು ಆದೇಶ ನೀಡಿದ್ದಾರೆ.

4 ಲಕ್ಷ ರೂ. ಪರಿಹಾರ: ಭಟ್ಕಳದಲ್ಲಿ 2015ರಲ್ಲಿ ಸಂಭವಿಸಿದ ಇನ್ನೊಂದು ಅಡುಗೆ ಅನಿಲ ಸಿಲಿಂಡ್ ಸ್ಪೋಟಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರಿಗೆ ಗ್ಯಾಸ್ ಏಜೆನ್ಸಿ ಹಾಗೂ ಇನ್ಶ್ಶೂರೆನ್ಸ್ ಕಂಪನಿ ಸೇರಿ 4.19 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

ಗುರುನಾಥ ಕೊಲ್ಲೆ ಎಂಬುವವರ ಮನೆಯಲ್ಲಿ ಸ್ಫೋಟ ಸಂಭವಿಸಿತ್ತು. ಗ್ರಾಹಕರು ಭಟ್ಕಳದ ಅನ್ವರ್ ಕಾಂಪ್ಲೆಕ್ಸ್​ನ ರಾಫತ್ ಗ್ಯಾಸ್ ಏಜೆನ್ಸಿ, ಯುನೈಟೆಡ್ ಇಂಡಿಯಾ ಇನ್ಶ್ಶೂರೆನ್ಸ್ ಹಾಗೂ ಇಂಡಿಯನ್ ಆಯ್್ಲ ಕಾಪೋರೇಷನ್ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಆಯ್್ಲ ಕಾಪೋರೇಷನ್ ಮೇಲಿನ ಆರೋಪ ತಳ್ಳಿ ಹಾಕಿದೆ. ಇನ್ಶ್ಶೂರೆನ್ಸ್ ಕಂಪನಿ 1 ಲಕ್ಷ ರೂ. ಪರಿಹಾರ ನೀಡಬೇಕು. ಡೀಲರ್ 3.19 ಲಕ್ಷ ರೂ. ಪರಿಹಾರ ನೀಡಬೇಕು. ಅಲ್ಲದೆ, ಈ ಇಬ್ಬರೂ ಸೇರಿ ಐದು ಸಾವಿರ ರೂ. ದಾವೆಯ ಖರ್ಚನ್ನು ಹೆಚ್ಚುವರಿಯಾಗಿ ಗ್ರಾಹಕನಿಗೆ ಪಾವತಿಸಬೇಕು ಎಂದು ಆದೇಶಿಸಿದೆ.