ಜಿಲ್ಲೆ

ಹಾಡುಗಳಿಗೆ ಹೆಜ್ಜೆ ಹಾಕಿದ ಪೊಲೀಸರು

ಅಶೋಕ್ ಕುಮಾರ್ ಎನ್

ಹೂವಿನಹಡಗಲಿ: ತಾಲೂಕಿನಲ್ಲಿ 181 ಗಣೇಶ ಮೂರ್ತಿಗಳನ್ನು ಅದ್ದೂರಿ ಮೆರವಣೆಗೆಯೊಂದಿಗೆ ಭಾನುವಾರ ವಿಸರ್ಜನೆ ಮಾಡಲಾಯಿತು.

ಇಟ್ಟಿಗಿ ಠಾಣೆ ವ್ಯಾಪ್ತಿಯಲ್ಲಿ 32, ಹೂವಿನಹಡಗಲಿ ಠಾಣೆ ವ್ಯಾಪ್ತಿಯಲ್ಲಿ 63, ಹಿರೇಹಡಗಲಿ ಠಾಣೆ ವ್ಯಾಪ್ತಿಯಲ್ಲಿ 86 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಯುವಕ, ಯುವತಿಯರು ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಪಟ್ಟಣದ ಶಾಸ್ತ್ರಿ ವೃತ್ತದಿಂದ ಮದಲಗಟ್ಟ ವೃತ್ತ ತಲುಪಿ ಅಲ್ಲಿಂದ ಪುರಸಭೆಯಿಂದ ಗುರುತಿಸಲಾದ ವಿಸರ್ಜನಾ ಕೇಂದ್ರ ಹಾಗೂ ಮದಲಗಟ್ಟಿ ಬಳಿ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಸಿಬ್ಬಂದಿ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿ ವಿಸರ್ಜನೆ ಮಾಡಿದರು. ಸಿಪಿಐ ದೀಪಕ್ ಆರ್.ಬೂಸರೆಡ್ಡಿ, ಪಿಎಸ್‌ಐ ಮಣಿಕಂಠ ಹಾಗೂ ಇತರ ಸಿಬ್ಬಂದಿ ಮೆರವಣಿಗೆಯಲ್ಲಿದ್ದರು.