ವಿಜಯವಾಣಿ ಸುದ್ದಿಜಾಲ ಮೈಸೂರು
ಡಿ.27 ರಿಂದ 31 ರವರೆಗೆ ಮಂಗಳೂರು ವಿವಿಯಲ್ಲಿ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡವನ್ನು ಭಾಗಿಯಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ. ಟಿಟಿಎಲಲ ಕಾಲೇಜಿನ ಜಿ.ಬಿ.ಶ್ರಾವ್ಯ(ನಾಯಕಿ), ಟೆರೇಷಿಯನ್ ಕಾಲೇಜಿನ ಎಸ್.ಆದಿರ, ಎಸ್.ಎಸ್.ನಿಶಾ, ಎಸ್.ಎಂ.ಪದ್ಮಾವತಿ, ಕೆ.ಎಸ್.ಅನ್ನಪೂರ್ಣ, ಹೇಮಾ ಅಶೋಕ, ಸಾನಿಯಾ ತಂಗಮ್ಮ, ಜೆ.ಚಂದನಾ, ಜಿ.ಕಾವ್ಯಾ, ಸಿ.ಕೆ.ಪ್ರಗತಿ, ಪಿಜಿಎಸ್‌ಇ ಮಾನಸ ಗಂಗೋತ್ರಿಯ ಕೆ.ಆರ್.ಕಾವ್ಯ, ಎಸ್.ಪಿ.ಕೃತಿಕಾ, ಚಿತ್ರಶ್ರೀ, ಪೂಜಿತಾ, ಸಂಧ್ಯಾ, ಎಂ.ಜಿ.ವೈಶಾಖ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತರಬೇತುದಾರ ಅಶೋಕ್ ವೈ ತುಪ್ಪಸುಂದರ್, ತಂಡದ ವ್ಯವಸ್ಥಾಪಕ ಆರ್.ಸುಂದರೇಶ್ ಜತೆ ತಮ್ಮ ಹಾಕಿ ತಂಡ ಮಂಗಳೂರು ವಿಶ್ವವಿದ್ಯಾಲಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾಗವಹಿಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.