ಹಾಸನ: ತಾಲೂಕಿನ ಶಾಂತ್ರಿಗ್ರಾಮ ಹೋಬಳಿಯ ಕಾರೆಕೆರೆ ಗ್ರಾಮದಲ್ಲಿ ಭಾನುವಾರ ಹಸುವಿನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ .
ಕಾರೆಕೆರೆ ಗ್ರಾಮದ ಜಮೀನಿನೊಂದರಲ್ಲಿ ಮೇಯುತ್ತಿದ್ದ ಹಸುವುನ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ ನಂತರ ಹಸುವನ್ನು ಎಳೆದುಕೊಂಡು ಹೋಗುವ ದೃಷ್ಯ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ. ಕೆಲವೊಂದೆಡೆ ಆನೆಗಳ ಕಾಟವಾದರೆ ಮತ್ತೊಂದೆಡೆ ಆಹಾರವನ್ನು ಹರಸಿ ಚಿರತೆಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ ಇದರಿಂದ ಗ್ರಾಮಸ್ಥರ ಆತಂಕ ಕಾರಣವಾಗಿದ್ದು ಕಂಗಾಲಾಗಿ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಪಟ್ಟು ಹಿಡಿದು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.