filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5277778, 0.31451613);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36; 
ಜಿಲ್ಲೆ

ಹಸಿದವರಿಗೆ ದಾನ ಮಾಡಿ

ಸಿರಿಗೇರಿ : ಆಹಾರ, ಗಾಳಿ, ಬೆಳಕು, ನೀರನ್ನು ಸದ್ಬಳಕೆ ಮಾಡಬೇಕು. ಹಿರಿಯರು ಅನುಸರಿಸಿದ ಮೌಢ್ಯಗಳನ್ನು ತ್ಯಜಿಸಿ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ವೆಂಕಟಾಪುರದ ಬಸವರಾಜಪ್ಪ ಶರಣರು ತಿಳಿಸಿದರು.

ಗ್ರಾಮದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವ ಬಳಗ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ನಾವೇ ಸೃಷ್ಟಿ ಮಾಡಿದ ಕಲ್ಲಿನ ನಾಗದೇವತೆಗಳಿಗೆ ಹಾಲೆರೆದರೆ ಹಾಲು ಮಣ್ಣು ಪಾಲಾಗುತ್ತದೆ. ಹಾವಿಗೆ ಹಾಲೆರೆದರೆ ಸಾಯುತ್ತದೆ. ಸಾವಿರಾರು ನಿರ್ಗತಿಕರಿಗೆ ಹಾಲನ್ನು ನೀಡಿದರೆ ಹಸಿವು ನೀಗುತ್ತದೆ. ದೇವರ ಹೆಸರಿನಲ್ಲಿ ದುರ್ವಿನಿಯೋಗ ಮಾಡಬೇಡಿ. ವಿದ್ಯಾರ್ಥಿಗಳು ತಿಳಿವಳಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಬಸವ ಬಳಗ ಗ್ರಾಮ ಘಟಕದ ಅಧ್ಯಕ್ಷ ಶಶಿಧರ್ ಗೌಡ ಮಾತನಾಡಿ, ಮಕ್ಕಳು ಈಗಿನಿಂದಲೇ ಒಳ್ಳೆಯ ಯೋಚನೆ, ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದರು. ಮಕ್ಕಳಿಗೆ ಹಾಲು ವಿತರಿಸಲಾಯಿತು. ಮುಖ್ಯಶಿಕ್ಷಕ ಎನ್.ಪಂಪಾಪತಿ, ಬಸವ ಬಳಗದ ಸದಸ್ಯರಾದ ಬಸವರಾಜ್ ಗೌಡ, ವೀರೇಶ್ ಗೌಡ, ಎಚ್.ಎರ‌್ರೆಪ್ಪ, ಎಂ.ಪಂಪನಗೌಡ, ಆರ್.ಯಲ್ಲನಗೌಡ, ಗುಂಡಿಗನೂರು ಯಲ್ಲನಗೌಡ, ಹೊಸಳ್ಳಿ ಚಂದ್ರಶೇಖರ್, ನಿಮಗಾಗಿ ನಾವು ಸಂಸ್ಥೆಯ ಪದಾಧಿಕಾರಿಗಳಾದ ಹಳ್ಳಿಮರದ ನಾಗರಾಜ್, ಶಿವಾಜಿರಾವ್, ಪುನೀತ್, ಶಿಕ್ಷಕರಾದ ಮಹಾಬಲೇಶ್, ರಂಜಿತ್ ಕುಮಾರ್ ಇದ್ದರು.