ನಂಜನಗೂಡು: ತಾಲೂಕಿನ ತಾಂಡವಪುರ ಗ್ರಾಮದ ಹೊರ ವಲಯದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ತೋಪಿನ ಆವರಣದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಕಾಡು ಪ್ರಾಣಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ಹಳ್ಳಿದಿಡ್ಡಿ ಗ್ರಾಮದ ರೈತ ಮಹಿಳೆ ನಂಜಮ್ಮ ಎಂಬುವರಿಗೆ ಸೇರಿದ ಹಸುವನ್ನು ರೇಷ್ಮೆ ಇಲಾಖೆಗೆ ಸೇರಿದ ತೋಪಿನ ಆವರಣದಲ್ಲಿ ಶುಕ್ರವಾರ ಮೇಯಲು ಬಿಡಲಾಗಿತ್ತು. ಮಧ್ಯಾಹ್ನದ ವೇಳೆ ಹಸುವಿನ ಚೀರಾಟದ ಕೇಳಿ ಸುತ್ತಮುತ್ತಲಿನವರು ಸ್ಥಳಕ್ಕೆಧಾವಿಸಿ ಗಾಯಗೊಂಡು ನರಳುತ್ತಿದ್ದ ಹಸುವನ್ನು ರಕ್ಷಿಸಿದ್ದಾರೆ. ಹಸುವಿನ ಮುಖದ ಭಾಗ ತೀವ್ರವಾಗಿ ಗಾಯಗೊಂಡಿದೆ.
ಮಾಹಿತಿ ತಿಳಿದು ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಸ್ಥಳಕ್ಕಾಗಿಮಿಸಿ ಪರಿಶೀಲಿಸಿದ್ದಾರೆ.