ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಾಂಚಜನ್ಯ ಹಿಂದೂ ಗಣಪತಿ ವಿಸರ್ಜನೆ ಅಂಗವಾಗಿ ಸೋಮವಾರ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. 
ಜಿಲ್ಲೆ

ಹಾಸನ: ಪಾಂಚಜನ್ಯ ಹಿಂದೂ ಗಣಪತಿ ಬೃಹತ್ ಶೋಭಾಯಾತ್ರೆ

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಾಂಚಜನ್ಯ ಹಿಂದೂ ಗಣಪತಿ ವಿಸರ್ಜನೆ ಅಂಗವಾಗಿ ಸೋಮವಾರ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.

ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ಮೆರವಣಿಗೆಯಲ್ಲಿ ಮಹಿಳೆಯರು ಸಹ ಕುಣಿದು ಕುಪ್ಪಳಿಸಿದರು. ಹತ್ತಾರು ಕಲಾ ತಂಡಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. ಗಣೇಶ ಮೂರ್ತಿಯೊಂದಿಗೆ ಕಲಾಭವನ ಆವರಣದಿಂದ ಆರಂಭಗೊಂಡ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದಾರಿ ಉದ್ದಕ್ಕೂ ಪ್ರಸಾದ ನಡೆಯಿತು. ಗಣೇಶ ಭಕ್ತರೊಂದಿಗೆ ಶಾಸಕ ಪ್ರೀತಂಗೌಡ ಮೆರವಣಿಗೆಯಲ್ಲಿ ಸಾಗಿ, ಅಭಿಮಾನಿಗಳೊಂದಿಗೆ ಕುಣಿದು ಸಂತಹ ಹಂಚಿದರು.

ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲೂ ಕೇಸರಿ ಧ್ವಜಗಳನ್ನು ನೆಟ್ಟಿದ್ದರಿಂದ ಇಡೀ ರಸ್ತೆ ಕೇಸರಿಮಯವಾಗಿ ಕಾಣುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಅಪಾರ ಸಂಖ್ಯೆಯ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ನಿರತರಾಗಿದ್ದರು.