ಜಿಲ್ಲೆ

ಹವ್ಯಾಸಿ ಆಪ್ತ ಸಮಾಲೋಚಕರ ಉಚಿತ ತರಬೇತಿ ಕಾರ್ಯಾಗಾರ

ಬೀದರ್: ವಿಕಾಸ ಅಕಾಡೆಮಿಯಿಂದ ಗುಂಪಾ ರಸ್ತೆಯ ಕುಂಬಾರವಾಡ ಕ್ರಾಸ್ ಸಮೀಪದ ಸನ್ ಸಾಫ್ಟ್ ಪದವಿ ಕಾಲೇಜಿನಲ್ಲಿ ಮಾ.6ರಿಂದ 10ರವರೆಗೆ ಹವ್ಯಾಸಿ ಆಪ್ತ ಸಮಾಲೋಚಕರ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಪದವೀಧರರು, ಯುವಕರು ಹಾಗೂ ಸಮಾಜ ಸೇವಾ ಆಸಕ್ತರು ಪಾಲ್ಗೊಳ್ಳಬಹುದು. ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ನೇತೃತ್ವದಲ್ಲಿ ಪರಿಣತರು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಿದ್ದಾರೆ ಎಂದು ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.

ತರಬೇತಿಯಲ್ಲಿ 50 ಮಂದಿಗೆ ಮಾತ್ರ ಅವಕಾಶ ಇದೆ. ತರಬೇತಿ ಅವಧಿಯಲ್ಲಿ ಚಹಾ ಹಾಗೂ ಊಟದ ವ್ಯವಸ್ಥೆ ಇರಲಿದೆ. ಸಮಾರೋಪದಲ್ಲಿ ತರಬೇತಿಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ಹಾಗೂ 1 ಸಾವಿರ ರೂ. ಮೌಲ್ಯದ ಪುಸ್ತಕ ಕೊಡಲಾಗುವುದು. ಹೆಸರು ನೋಂದಣಿಗೆ ಮಾ.2 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮೊ.94484 22734 ಅಥವಾ 94490 09023ಗೆ ಸಂಪರ್ಕಿಸಬಹುದು.