ಜಿಲ್ಲೆ

ಹವಾಮಾನ ವೈಪರೀತ್ಯ, ಕೀಟಬಾಧೆ, ಕಳಪೆ ಕೀಟನಾಶಕ : ನಿರಂತರ ಸಂಕಷ್ಟಕ್ಕೊಳಗಾಗಿರುವ ಮಾವು ಬೆಳೆಗಾರರು

ಎಂ.ಎನ್​. ಸುರೇಶ್​ ಕನಕಪುರ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸರ್ಕಾರದ ಅಸಮರ್ಪಕ ನೀತಿಗಳಿಂದಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಳೆ ಆಧಾರಿತ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಮಾವು ವಾತಾವರಣ, ಕೀಟಬಾಧೆ, ರೋಗ ಹಾಗೂ ಮಳೆಯ ವೈಪರೀತ್ಯದಿಂದಾಗಿ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ರಾಮನಗರ ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಎದುರಾಗಿದೆ. ಕನಕಪುರ ತಾಲೂಕಿನಲ್ಲೂ ಸಾವಿರಾರು ರೈತರು ಮಾವು ಬೆಳೆಯನ್ನೇ ನಂಬಿ ಬದುಕುತ್ತಿದ್ದಾರೆ. ತಾಲ್ಲೂಕೊಂದರಲ್ಲಿಯೇ 60 ಸಾವಿರ ಟನ್​ ಮಾವು ಬೆಳೆ ಬೆಳೆಯಲಾಗುತ್ತದೆ. ಅದರಲ್ಲಿ ಸಾತನೂರು ಹೋಬಳಿಯ ಕುರುಬಳ್ಳಿ, ವೆಂಕಟರಾಯನದೊಡ್ಡಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಉಳಿದಂತೆ ಕಸಬಾ ಹೋಗಳಿ ಕೋಡಿಹಳ್ಳಿ, ಉಯ್ಯಂಬಳ್ಳಿ ಪ್ರದೇಶಗಳಲ್ಲೂ ಅಲ್ಲಲ್ಲಿ ಮಾವು ಬೆಳೆಯಲಾಗುತ್ತದೆ.

ಈ ಎಲ್ಲದರ ಜತೆಗೆ ತಾಲೂಕಿನಲ್ಲಿ 2004ರಿಂದಲೂ ಮಾವಿನ ಬೆಳೆಗೆ ಜಿಗಿ (ಜೋನಿ)ಹುಳು ಕಾಟ ಕಾಡುತ್ತಿದೆ. ಜಿಗಿ ಹುಳು ಕಾಟ ಅತಿಯಾಗಿದ್ದು, ಮಾವಿನ ಮರದ ಸತ್ವವನ್ನೇ ಹೀರಿ ಕಾಯಿ ಕೊರೆಯುವುದರಿಂದ ಸಲು ಬಿಟ್ಟ ಮರವೇ ನಾಶವಾಗುವ ಹಂತ ತಲುಪುತ್ತದೆ. ಜಿಗಿ ಹುಳು ನಿಯಂತ್ರಣಕ್ಕೆ ಸರ್ಕಾರ ಸಮರ್ಪಕ ಔಷಧ ವಿತರಿಸುತ್ತಿಲ್ಲ. ಜತೆಗೆ ಉಚಿತವಾಗಿ ರೈತರಿಗೆ ಸರಬರಾಜು ಮಾಡುತ್ತಿರುವ ಔಷಧ ಹಾಗು ಕ್ರಿಮಿನಾಶಕಗಳ ಗುಣಮಟ್ಟವೂ ಉತ್ತಮವಾಗಿಲ್ಲ. ಇವುಗಳಿಂದ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅಲ್ಪಸ್ವಲ್ಪ ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ಬೆಳೆಗಾರರನ್ನು ಹೈರಾಣು ಮಾಡಿದೆ ಎನ್ನುವುದು ರೈತರ ದೂರಾಗಿದೆ. ಹೀಗಾಗಿ ರೈತರು ಇತ್ತ ಸರ್ಕಾರವನ್ನೂ ನಂಬಲಾಗದೇ, ಅತ್ತ ಬಹುರಾಷ್ಟ್ರೀಯ ಕಂಪನಿಗಳನ್ನೂ ಬಿಡಲಾಗದೆ ಪರಿತಪಿಸುವಂತಾಗಿದೆ. ಜತೆ ಕಾಡಾನೆ ಹಾವಳಿಯೂ ರೈತರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ.

ಅನುಕೂಲಕರ ವಾತಾವರಣ ನಿರ್ಮಾಣ ಅಗತ್: ಸೂಕ್ತ ಬೆಲೆ ಸಿಗದೆ ಕಂಗಾಲಾಗುತ್ತಿರುವ ಮಾವು ಬೆಳೆಗಾರರಿಗೆ ಹಣ್ಣುಗಳನ್ನು ರಸಲು ಮಾವು ಬೆಳೆಯುವ ಪ್ರದೇಶಗಳಲ್ಲಿ ತಾಲೂಕಿಗೊಂದರಂತೆ ಶೀತಲೀಕರಣ ಕೇಂದ್ರದ ವ್ಯವಸ್ಥೆ ಮಾಡಬೇಕಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ಬೆಳೆಗಾರರಿಗೆ ಅನುಕೂಲಕರ ವಾತಾವರಣ ಕಲ್ಪಿಸಲು ವಿಫಲರಾಗಿದ್ದಾರೆ. ಮಾವು ಬೆಳೆಗಾರರಿಗೆ ಪ್ಯಾಕೇಜ್​ ಘೋಷಿಸುವ ತುರ್ತುಕ್ರಮಕ್ಕೆ ಮುಂದಾಗಿಲ್ಲ. ಇಂತಹ ರ್ನಿಲಕ್ಷ$್ಯ ಧೋರಣೆಯಿಂದ ಬೆಳೆಗಾರರ ಜತೆಗೆ ಮಾವಿನ ಮರಗಳೂ ಗೊಡ್ಡು ಮರಗಳಾಗಿ ನಾಶವಾಗುತ್ತಿವೆ. ವಸಂತ ಋತುವಿನಲ್ಲಿ ಚಿಗುರು ಒಡೆದು ಆಶಾದಾಯಕವಾಗಬೇಕಾಗಿದ್ದ ಮಾವಿನ ಮರದ ಎಲೆಗಳು ಸುರುಳಿ ರೋಗಕ್ಕೆ ತುತ್ತಾಗಿ ನಾಶವಾಗುತ್ತಿವೆ. ಸರ್ಕಾರ ಮಾವನ್ನು ಸಂಸ್ಕರಣೆ ಮಾಡಿ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಉಚಿತ ಮಾವಿನ ಹಣ್ಣು ನೀಡುವುದು ಅಥವಾ ಮಾವಿನ ಜೂಸ್​ ನೀಡುವುದು ಸೂಕ್ತ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.

ಭಿಕ್ಷೆ ಬೇಡ: ಒಂದು ಮಾವಿನ ಮರ ವರ್ಷಕ್ಕೆ 20ರಿಂದ 25 ಸಾವಿರ ರೂ.ನಷ್ಟು ಸಲು ನೀಡುತ್ತದೆ. ಒಂದು ಎಕರೆಗೆ ಕನಿಷ್ಠ 40 ಮರಗಳನ್ನು ಬೆಳೆಯಬಹುದಾಗಿದೆ. ಇಂತಹ ಸಮಯದಲ್ಲಿ ರೈತರಿ ಕಣ್ಣೊರೆಸುವ ತಂತ್ರವಾಗಿ ನೀಡುವ ಪರಿಹಾರ ದಯಾಭಿೆಯಂತೆ ಕಾಣುತ್ತಿದೆ. ಆದ್ದರಿಂದ ಇದನ್ನು ಬಿಟ್ಟು ರೈತರನ್ನು ಉಳಿಸಲು ಶಕ್ತಿ ನೀಡುವಂತಹ ಕೆಲಸವಾಗಬೇಕು. ತೋಟಗಾರಿಕೆ ಇಲಾಖೆ ಮಾವು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಲು ಸೂಕ್ತ ಬೆಲೆ ಒದಗಿಸಬೇಕು, ವೈಜ್ಞಾನಿಕ ಚಿಂತನೆ, ಕಾಲಕಾಲಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ರೂಪಿಸಬೇಕೆಂದು ರೈತರಾದ ಬಿ.ಎಸ್​. ದೊಡ್ಡಿ ಚಿನ್ನಗಿರಿಗೌಡ, ಹೊಸಕೆರೆದೊಡ್ಡಿ ಸಿದ್ದರಾಜು, ಅರಸು, ವೆಂಕಟರಾಯನದೊಡ್ಡಿ ಆತ್ಮಪ್ರಕಾಶ್​ ಆಗ್ರಹಿಸಿದ್ದಾರೆ.

ಈ ವರ್ಷ ಮಾವು ಬೆಳೆಗಾರನ ಬದುಕು ಅತ್ಯಂತ ಬರ್ಬರವಾಗಿದೆ. ರೈತರ ಪ್ರತಿ ಎಕರೆಗೆ ಸರ್ಕಾರ 32 ಸಾವಿರ ರೂ. ಪರಿಹಾರ ಘೋಷಿಸಬೇಕು. ಮಾವಿನ ತೋಟದಲ್ಲಿ ಬೆಳೆಯುವ ರಾಗಿ ಬೆಳೆ ಪರಿಹಾರವನ್ನು ಹೊರತುಪಡಿಸಿ ನಷ್ಟವಾಗುತ್ತಿರುವ ಮಾವಿಗೂ ಪ್ರತ್ಯೇಕ ಸೂಕ್ತ ಪರಿಹಾರ ನೀಡಬೇಕು. ಅಶ್ವಥ್​ನಾರಾಯಣ, ಜಿಲ್ಲಾ ಮಾವು ಮತ್ತು ತೆಂಗು ಉತ್ಪಾದಕರ ಕಂಪನಿ ನಿರ್ದೇಶಕ ಹಗಲಿನ ವೇಳೆ ವಿದ್ಯುತ್​ ನೀಡದೇ ರಾತ್ರಿಯ ನೀಡುತ್ತಿರುವುದು ತೊಂದರೆಯಾಗಿದೆ. ಹೆದ್ದಾರಿಗಳ ವಿಸ್ತರಣೆಗೆ ಬಲಿಯಾಗುವ ಹುಣಸೆ ಮರಕ್ಕೆ 86 ಸಾವಿರ, ತೆಂಗಿನ ಮರಕ್ಕೆ 44 ಸಾವಿರ, ಮಾವಿನ ಮರಕ್ಕೆ 48 ಸಾವಿರ ರೂ. ಪರಿಹಾರ ನೀಡುವ ಸರ್ಕಾರ, ರೈತರಿಗೇಕೆ ಸಮರ್ಪಕ ಪರಿಹಾರ ನೀಡುವುದಿಲ್ಲ? ಲಕ್ಷಿ$್ಮನಾರಾಯಣ, ಮಾವು ಬೆಳೆಗಾರ, ತಿಗಳರಹೊಸಹಳ್ಳಿ ಬರಗಾಲದೂಗಿಸಿ ಮುಂದೆ ಹೋಗುವ ಹೊತ್ತಿಗೆ ಅಕಾಲಿಕ ಮಳೆ ಮಾವು ಬೆಳೆಗಾರರಿಗೆ ಬೆಂಬಿಡದೆ ಕಾಡಿದ್ದು, ಫಸಲು ಹಿನ್ನಡೆಗೆ ಕಾರಣವಾಗಿದೆ. ಜೋನಿ ಹುಳು ಹಾಗು ಕೀಟಬಾಧೆ ನಿಯಂತ್ರಿಸಲು ಹೆಚ್ಚಿನ ಪ್ರಚಾರ ಹಾಗೂ ರೈತರಿಗೆ ಮಾಹಿತಿ ನೀಡಿದ್ದರೂ ಇಳುವರಿ ಮಾತ್ರ ಫಲಪ್ರದವಾಗಿಲ್ಲ. ಹರೀಶ್​, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ