ಹೂಲಿ: ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸೋಗಿನ ಸೊಬಗು ಕಾರ್ಯಕ್ರಮಕ್ಕೆ ಉಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು.
ವಿಶ್ವಾಸ ವೈದ್ಯ ಮಾತನಾಡಿ, ಗ್ರಾಮದ ಹಿರಿಯರು ಆದಿಕಾಲದಿಂದ ನಡೆಸಿಕೊಂಡು ಬಂದಿರುವ ಕಲಾಸೇವೆ ಇಂದಿಗೂ ಮುಂದುವರಿದಿರುವುದು ನಿಜಕ್ಕೂ ಶ್ಲಾನೀಯ. ಹಳ್ಳಿಗಳಲ್ಲಿ ಭಾರತೀಯ ಸಂಸತಿ ಇನ್ನೂ ಉಳಿದಿದೆ. ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಆಗಮಿಸುತ್ತೇನೆ ಎಂದರು. ಗ್ರಾಪಂ ಉಪಾಧ್ಯ ಯಲ್ಲಪ್ಪ ಕಾರ್ಯಕಟ್ಟಿ, ಮಾಜಿ ಅಧ್ಯಕ್ಷ ವಿರೂಪಾ ತೋರಗಲ್, ಹನುಮಂತ ಗೋರವನಕೊಳ್ಳ, ಸಿದ್ದಪ್ಪ ದಿಡಗನ್ನವರ, ಮುರಳೀಧರ ಹುರಳಿ, ಸುನೀಲ ಪಾಟೀಲ, ಗಂಗಪ್ಪ ಹಾಲಪ್ಪನವರ, ಅಶೋಕ ಕುಲಕರ್ಣಿ, ಶೇಖಪ್ಪ ಪತ್ರಾವಳಿ ಇತರರಿದ್ದರು.