ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ವಿಹಂಗಮ ನೋಟ. 
ಜಿಲ್ಲೆ

ಹಳ್ಳಿಯ ಶ್ರಮಿಕರಿಗೆ ದಿಲ್ಲಿ ಭಾಗ್ಯ

ಜಯತೀರ್ಥ ಪಾಟೀಲ್​ ಕಲಬುರಗಿ

ದೇಶದ ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ ಆ.೧೫ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಒಬ್ಬ ರೈತ, ಒಬ್ಬ ಕಾರ್ಮಿಕರಿಗೆ ವಿಶೇಷ ಆಹ್ವಾನ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿರುವ ರಾಷ್ಟçಧ್ವಜಾರೋಹಣ ಸಮಾರಂಭಕ್ಕೆ ಸೂಚಿಸಿದ ಸಮವಸ್ತç (ಬಿಳಿ ಬಣ್ಣ) ಧರಿಸಿ ಬರುವಂತೆ ರಾಜ್ಯದಿಂದ ಒಟ್ಟು ನಾಲ್ವರಿಗೆ ಆಮಂತ್ರಣ ಬಂದಿದ್ದು, ಅದರಲ್ಲಿ ಇಬ್ಬರು ಕಲಬುರಗಿಯವರಾಗಿದ್ದು ವಿಶೇಷ.
ಹೊನ್ನಕಿರಣಗಿಯ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕಳಾದ ಬಸಮ್ಮ ಭಗವಂತರಾಯ ಪೂಜಾರಿ ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ, ನಂದೂರ (ಕೆ)ಗ್ರಾಮದ ರೈತ ಆನಂದ ಬೆಳಗುಂಪಿ ವಿಶೇಷ ಆಹ್ವಾನಿತರಾಗಿದ್ದಾರೆ. ಇನ್ನುಳಿದಂತೆ ಕೋಲಾರ ಜಿಲ್ಲೆಯ ಪೆದ್ದಪಲ್ಲಿ ಗ್ರಾಮದ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕಳಾದ ಮಲ್ಲಾರವಳ್ಳಿ ಗಣೇಶನ್ ಹಾಗೂ ಮಂಡ್ಯ ಜಿಲ್ಲೆಯ ಎನ್.ಎಚ್.ವಿರೂಪಾಕ್ಷಮೂರ್ತಿ ಪಾಲ್ಗೊಳ್ಳುತ್ತಿದ್ದಾರೆ.
ಸುವರ್ಣ ಸ್ವಾತಂತ್ರೊÈÃತ್ಸವ ಅಂಗವಾಗಿ ಅಮೃತ ಸರೋವರ, ಕೆರೆ ನಿರ್ಮಾಣಕ್ಕಾಗಿ ಕೈ ಜೋಡಿಸಿದ ಉದ್ಯೋಗ ಖಾತ್ರಿ ಯೋಜನೆ ಅಡಿ ದೇಶಾದ್ಯಂತ ೫೦ ಕೂಲಿ ಕಾರ್ಮಿಕರಿಗೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕಲಬುರಗಿಯ ಬಸಮ್ಮ ಹಾಗೂ ಕೋಲಾರದ ಮಲ್ಲಾರವಳ್ಳಿ ಸೇರಿದ್ದಾರೆ. ದೇಶವ್ಯಾಪಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳನ್ನು ಸ್ವಾತಂತ್ರೊತ್ಸವ ಸಮಾರಂಭಕ್ಕೆ ಆಮಂತ್ರಿಸಲಾಗಿದ್ದು, ಕಲಬುರಗಿ ರೈತ ಆನಂದ ಬೆಳಗುಂಪಿ ಹಾಗೂ ಮಂಡ್ಯ ಜಿಲ್ಲೆಯ ವಿರೂಪಾಕ್ಷಮೂರ್ತಿ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿ ಆಯಾ ಇಲಾಖೆಗೆ ವಹಿಸಲಾಗಿದೆ.
ಹೊನ್ನಕಿರಣಗಿಯ ೫೦ ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣವಾಗುತ್ತಿದ್ದು, ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ೯೦೦ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪ್ರಸಕ್ತ ವರ್ಷದ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ೧.೧೫ ಕೋಟಿ ರೂ ಕೂಲಿ ಹಣ ಪಾವತಿಸಲಾಗಿದೆ. ಬಹುತೇಕರು ನೂರು ದಿನ ಪೂರ್ಣಗೊಳಿಸಿದ್ದಾರೆ. ಬಸಮ್ಮ ಪೂಜಾರಿ ಒಂದು ದಿನವೂ ಗೈರು ಹಾಜರಾಗದೇ ನೂರು ದಿನಗಳ ಮಾನವ ದಿನ ಪೂರೈಸಿದ್ದಾರೆ. ಹೊನ್ನಕಿರಣಗಿ ಬಿಟ್ಟು ದೂರದ ಊರಿಗೆ ಹೋಗದ ಬಸಮ್ಮಳಿಗೆ ದೇಶದ ರಾಜಧಾನಿ ಅದರಲ್ಲೂ ಸ್ವಾತಂತ್ರೋತ್ಸವ ಮತ್ತು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿರುವ ರಾಷ್ಟçಧ್ವಜಾರೋಹಣ ಸಮಾರಂಭಕ್ಕೆ ಆಹ್ವಾನ ಬಂದಿರುವುದು ವಿಶೇಷ. ತಮ್ಮೂರಿನ ಮಹಿಳೆ ಪ್ರಧಾನಿಗಳ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಮಂತ್ರಣ ಬಂದಿದ್ದರಿಂದ ಉದ್ಯೋಗ ಖಾತ್ರಿ ಯೋಜನೆಯ ೨೦ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದೆಹಲಿಗೆ ತೆರಳುತ್ತಿರುವುದಾಗಿ ಕ್ಷೇತ್ರ ಸಹಾಯಕ ಸದಾಶಿವ ಹೈದ್ರಾ ಹೇಳಿದ್ದಾರೆ. ಹೊನ್ನಕಿರಣಗಿಯಲ್ಲಿ ಮತ್ತೊಂದು ಅರಣ್ಯ ಕ್ರಾಂತಿಯಾಗಿದ್ದು, ಉದ್ಯೋಗ ಖಾತ್ರಿ ಯೋಜನೆ ಅಡಿ ೬೮ ಸಾವಿರ ಸಸಿಗಳನ್ನು ನೆಟ್ಟು ಸಮೃದ್ಧ ಕಾಡು ಬೆಳೆಸಲಾಗಿದೆ. ೩.೨೦ ಎಕರೆ ಭೂಮಿ ಹೊಂದಿರುವ ಪಿಎಂ ಕಿಸಾನ್ ಯೋಜನೆ ೧೪ ಕಂತುಗಳ ಆರ್ಥಿಕ ಸಹಾಯ ಪಡೆದ ನಂದೂರ (ಕೆ) ಗ್ರಾಮದ ಮಾದರಿ ರೈತ ಆನಂದ ಬೆಳಗುಂಪಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಹಾಗೂ ಕೃಷಿ ಸಮ್ಮಾನ್ ನಿಧಿ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ಅಥವಾ ಫೋಟೋ ಸೆಷನ್ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿಗಳನ್ನು ಟಿವಿಯಲ್ಲೇ ನೋಡುತ್ತಿದ್ದೆವು. ಆದ್ರ ಈಗ ನೇರವಾಗಿ ಸಮಾರಂಭದಲ್ಲೇ ಪಾಲ್ಗೊಂಡು ನೋಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನಂಬಲಿಕ್ಕಾಗುತ್ತಿಲ್ಲ. ಕಲಬುರಗಿ ಬಿಟ್ಟು ಬ್ಯಾರೆ ಕಡೆ ಹೋಗದ ನನಗ ದಿಲ್ಲಿ ನೋಡುವ ಭಾಗ್ಯ ಬಂದಿದ್ದು ಜೀವನದಲ್ಲಿ ಮರೆಯಲಾಗದ ಸಂಗತಿ.|ಬಸಮ್ಮ ಪೂಜಾರಿ,ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕಳು ದಿಲ್ಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲು ನನಗೆ ಆಯ್ಕೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ಫೋನ್ ಮಾಡಿ ತಿಳಿಸಿದಾಗ ರೋಮಾಂಚನವಾಯಿತು. ಪ್ರಧಾನಮಂತ್ರಿಗಳ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ಎಲ್ಲಿಲ್ಲದ ಖುಷಿ ತಂದಿದ್ದು ತೀವ್ರ ಕಾತರನಾಗಿದ್ದೇನೆ. ನನ್ನ ಜೀವಮಾನದ ಅತ್ಯಂತ ಅದ್ಭುತ ಕ್ಷಣ ಇದಾಗಲಿದೆ.ಆನಂದ ಬೆಳಗುಂಪಿ, ರೈತ, ನಂದೂರ್(ಕೆ). ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಾದ ಬಸಮ್ಮ ಭಗವಂತರಾಯ ಅವರು ಕರ್ನಾಟಕ ಪ್ರತಿನಿಧಿಸಿ ದೇಶದ ಸ್ವಾತಂತ್ರೊತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ತಂದಿದೆ. ೫೪ ಎಕರೆಯಲ್ಲಿ ಕೆರೆ ನಿರ್ಮಾಣಗೊಳ್ಳುತ್ತಿರುವುದು ಮಾದರಿ ಕೆಲಸ. ಉದ್ಯೋಗ ಖಾತ್ರಿ ಯೋಜನೆ ಮತ್ತಷ್ಟು ಪರಿಣಾಮಕಾರಿ ಜಾರಿಯಾಗಲು ಇದು ಪ್ರೇರಣೆ.ಭಂವರ್‌ಸಿಂಗ್ ಮೀನಾ, ಸಿಇಓ, ಜಿಪಂ ಕಲಬುರಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ದೇಶದ ಸ್ವಾತಂತ್ರೊತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿರುವುದು ಇಡೀ ಕೃಷಿ ಇಲಾಖೆಗೆ ಖುಷಿ ತಂದಿದೆ. ರೈತನನ್ನು ದಿಲ್ಲಿಗೆ ಕರೆದುಕೊಂಡು ಹೋಗಿ, ಮರಳಿ ಕರೆದುಕೊಂಡು ಬರುವ ಜವಾಬ್ದಾರಿ ಇಲಾಖೆ ವಹಿಸಿಕೊಂಡಿದೆ.ಸಮದ್ ಪಟೇಲ್ಜಂಟಿ ಕೃಷಿ ನಿರ್ದೇಶಕ, ಕಲಬುರಗಿ