ಜಿಲ್ಲೆ

ಹಳ್ಳಿಗರ ಜಾನಪದ ಕಲೆಗಳಿಗೆ ಸರಿಸಾಟಿ ಇಲ್ಲ

Dharwad

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಹಳ್ಳಿಗರ ಜಾನಪದ ಕಲೆಗಳಿಗೆ ಸರಿಸಾಟಿ ಇಲ್ಲ. ಅವು ನಶಿಸಿ ಹೋಗುವ ಸಂದರ್ಭದಲ್ಲಿ ಇಂತಹ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸಬೇಕು. ಈ ಮೂಲಕ ನಮ್ಮ ನಾಡು- ನುಡಿ, ನೆಲ- ಜಲ ಹಾಗೂ ಕಲೆ ಉಳಿಸಬೇಕು ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.
ತಾಲೂಕಿನ ಇಟಿಗಟ್ಟಿಯ ಶ್ರೀ ಪಾಂಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಾಂಸ್ಕೃತಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಗೇದಾರ ಅಧ್ಯಕ್ಷತೆ ವಹಿಸಿದ್ದರು.
ದೇವರಹುಬ್ಬಳ್ಳಿಯ ಹಿರಿಯ ಜಾನಪದ ಕಲಾವಿದರಾದ ಪಾರ್ವತವ್ವ ಹೊಂಗಲ್, ಮಹದೇವಪ್ಪ ಹರಿಜನ್, ಇಮಾಮಸಾಬ ವಲ್ಲೆಪ್ಪನವರ, ಯಕ್ಕೇರಪ್ಪ ನಡುವಿನಮನಿ, ಶಿವಾನಂದ ಅಮರಶೆಟ್ಟಿ, ಮಹದೇವಪ್ಪ ರೇವಡಿಹಾಳ ಅವರಿಗೆ ‘ಜಾನಪದಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅನಸೂಯಾ ಹಂಚಿನಾಳ, ವಿಲಾಸ ಶೇರ್‌ಖಾನ್ ಅವರಿಗೆ ‘ರಂಗಸಿರಿ’ ಪ್ರಶಸ್ತಿ, ಪ್ರಕಾಶ ಮಲ್ಲಿಗವಾಡ, ಸಂಜು ಕುಂದಗೋಳ, ಎ.ಎಂ. ಸಯ್ಯದ್, ಮಲ್ಲನಗೌಡ ಪಾಟೀಲ ಅವರಿಗೆ ‘ನೃತ್ಯ ಸಿರಿ’ ಪ್ರಶಸ್ತಿ ಹಾಗೂ ಪ್ರಕಾಶ ಉಡಿಕೇರಿ, ಮೃತ್ಯುಂಜಯ ಗಾಣಿಗೇರ ಅವರಿಗೆ ‘ಕಾನೂನು ಸಿರಿ’, ವೀರಣ್ಣ ವಡ್ಡೀನ, ಜಿ.ಟಿ. ದೊಡಮನಿ, ಎಸ್.ಎನ್. ದಾನಪ್ಪಗೌಡರ, ಸಾದಿಕ್ ಸೌದಾಗರ್, ಗುರು ತಿಗಡಿ ಅವರಿಗೆ ‘ಶಿಕ್ಷಣ ಸಿರಿ’, ಸತೀಶ ತುರುಮುರಿ, ಚನ್ನಬಸಪ್ಪ ನವಲೂರ, ನಿಂಗಪ್ಪ ಹಡಪದ ಅವರಿಗೆ ‘ಸಮಾಜ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕವಿವಿ ಸಿಂಡಿಕೇಟ್ ಸದಸ್ಯ ಕಲ್ಮೇಶ ಹಾವೇರಿಪೇಟ, ಮುಖಂಡರಾದ ಮಹಾದೇವ ದೊಡ್ಡಮನಿ, ಲಕ್ಷ್ಮಣ ಬಕ್ಕಾಯಿ, ಎಫ್.ಬಿ. ಕಣವಿ, ಇತರರಿದ್ದರು.
ಕಲಾ ಸಂಟಕ ಪ್ರಭು ಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾಂಕಾ ಕುಂದರಗಿ ನಿರೂಪಿಸಿದರು. ಭಜನೆ, ತತ್ವಪದಗಳು, ಜಾನಪದ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಡೊಳ್ಳಿನ ಪದ, ಜಾನಪದ ನೃತ್ಯ, ಸುಗ್ಗಿಕುಣಿತ ಪ್ರದರ್ಶನಗೊಂಡವು.